Revert "Only store leading 13 bits of password hash."
[chromium-blink-merge.git] / chrome / app / resources / terms / terms_kn.html
blob93d9cb3b12bba7e6201a4c0cdedaf51a4b47819e
1 <!DOCTYPE HTML PUBLIC "-//W3C//DTD HTML 4.01 Transitional//EN"
2 "http://www.w3.org/TR/html4/loose.dtd">
3 <html DIR="LTR">
4 <head>
5 <meta http-equiv="Content-Type" content="text/html; charset=UTF-8">
6 <link rel="icon" type="image/ico" href="/tools/dlpage/res/chrome/images/chrome-16.png"><title>Google Chrome ಸೇವಾ ನಿಯಮಗಳು</title>
7 <style>
8 body { font-family:Arial; font-size:13px; }
9 h2 { font-size:1em; margin-top:0 }
10 </style>
11 <script type="text/javascript">
12 function carry_tracking(obj) {
13 var s = '(\\?.*)';
14 var regex = new RegExp(s);
15 var results = regex.exec(window.location.href);
16 if (results != null) {
17 obj.href = obj.href + results[1];
18 } else {
19 s2 = 'intl/([^/]*)';
20 regex2 = new RegExp(s2);
21 results2 = regex2.exec(window.location.href);
22 if (results2 != null) {
23 obj.href = obj.href + '?hl=' + results2[1];
27 </script></head>
29 <body>
30 <h2>Google Chrome ಸೇವಾ ನಿಯಮಗಳು</h2>
31 <p>ಈ ಸೇವೆಯ ನಿಯಮಗಳುGoogle Chrome ನ ಕಾರ್ಯಗತಗೊಳಿಸುವ ಕೋಡ್ ಆವೃತ್ತಿಗೆ ಅನ್ವಯಿಸುತ್ತದೆ. Google Chrome ನ ಮೂಲ ಕೋಡ್ http://code.google.com/chromium/terms.html ನಲ್ಲಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿ ಒಪ್ಪಂದದ ಅಡಿಯಲ್ಲಿ ಉಚಿತವಾಗಿ ಲಭ್ಯವಿದೆ.</p>
32 <p><strong>1. Google ನೊಂದಿಗೆ ನಿಮ್ಮ ಸಂಬಂಧ</strong></p>
33 <p>1.1 Google ನ ಉತ್ಪನ್ನಗಳು, ಸಾಫ್ಟ್‌ವೇರ್, ಸೇವೆಗಳು ಮತ್ತು ವೆಬ್‌ಸೈಟ್‍ಗಳ (ಈ ಡಾಕ್ಯುಮೆಂಟಿನಲ್ಲಿ ಒಂದಾಗಿ "ಸೇವೆಗಳು" ಎಂದು ಉಲ್ಲೇಖಿಸಲಾಗಿದೆ ಮತ್ತು ಬೇರೊಂದು ಲಿಖಿತ ಒಪ್ಪಂದದಡಿಯಲ್ಲಿ Google ನಿಂದ ನಿಮಗೆ ಒದಗಿಸಲಾದಂತಹ ಯಾವುದೇ ಸೇವೆಗಳನ್ನು ಹೊರತುಪಡಿಸಿ) ನಿಮ್ಮ ಬಳಕೆಯು ನಿಮ್ಮ ಮತ್ತು Google ನ ನಡುವಣವಿರುವ ಕಾನೂನು ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ. “Google” ಎಂದರೆ Google Inc. ಇದರ ಪ್ರಧಾನ ವ್ಯವಹಾರ ಸ್ಥಳವು 1600 ಅಂಫಿಥಿಯೇಟರ್ ಪಾರ್ಕ್‌ವೇ, ಮೌಂಟೇನ್ ವ್ಯೂ, CA 94043, ಯುನೈಟೆಡ್ ಸ್ಟೇಟ್ಸ್‌ನಲ್ಲಿದೆ, ಈ ಡಾಕ್ಯುಮೆಂಟ್ ಒಪ್ಪಂದವು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ವಿವರಿಸುತ್ತದೆ, ಮತ್ತು ಆ ಒಪ್ಪಂದದ ಕೆಲವೊಂದು ನಿಯಮಗಳನ್ನು ಹೊರಗೆಡವುತ್ತದೆ.</p>
34 <p>1.2 Google ನೊಂದಿಗೆ ಲಿಖಿತವಾಗಿ ಸಹಮತ ನೀಡದಿದ್ದಾಗಲೂ, ನಿಮ್ಮ Google ಜೊತೆಗಿನ ಒಪ್ಪಂದವು, ಕನಿಷ್ಠ, ಈ ಡಾಕ್ಯುಮೆಂಟಿನಲ್ಲಿ ತಿಳಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿರುತ್ತದೆ. “ಸಾರ್ವತ್ರಿಕ ನಿಯಮಗಳು ” ಎಂಬ ಹೆಸರಿನಲ್ಲಿ ಅವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ. Google Chrome ಮೂಲ ಕೋಡ್‌ಗಾಗಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಪ್ರತ್ಯೇಕವಾದ ಲಿಖಿತ ಒಪ್ಪಂದವನ್ನು ಹೊಂದಿರುತ್ತದೆ. ಕೆಲವು ಮಿತಿಯವರೆಗೆ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಈ ಸಾರ್ವತ್ರಿಕ ನಿಯಮಗಳನ್ನು ಬಹಿರಂಗವಾಗಿಯೇ ಅತಿಕ್ರಮಿಸುತ್ತದೆ. Google Chrome ಅಥವಾ Google Chrome ನ ನಿರ್ದಿಷ್ಟವಾಗಿ ಸೇರ್ಪಡಿಸಿದ ಅಂಶಗಳ ಬಳಕೆಗಾಗಿ ತೆರೆದ ಮೂಲ ಪರವಾನಗಿಗಳುGoogle ನೊಂದಿಗೆ ನಿಮ್ಮ ಒಪ್ಪಂದವನ್ನು ನಿಯಂತ್ರಿಸುತ್ತವೆ.</p>
35 <p>1.3 Google ನೊಂದಿಗಿನ ನಿಮ್ಮ ಒಪ್ಪಂದವು ಈ ದಾಖಲೆ ಮತ್ತು ಸೇವೆಗಳಿಗೆ ಅನ್ವಯವಾಗುವ ಯಾವುದೇ ಕಾನೂನು ಪ್ರಕಟಣೆಗಳ ನಿಯಮಗಳು, ಸಾರ್ವತ್ರಿಕ ನಿಯಮಗಳಿಗೆ ಹೆಚ್ಚುವರಿಯಾಗಿ, Appendix A ನಲ್ಲಿ ಹೇಳಲಾದ ನಿಯಮಗಳನ್ನೂ ಒಳಗೊಂಡಿದೆ. ಇವುಗಳಲ್ಲಿನ ಎಲ್ಲವನ್ನೂ ಕೆಳಗೆ “ಹೆಚ್ಚುವರಿ ನಿಯಮಗಳು” ಎಂದು ಉಲ್ಲೇಖಿಸಲಾಗಿದೆ. ಸೇವೆಗೆ ಹೆಚ್ಚುವರಿ ನಿಯಮಗಳನ್ನು ಅನ್ವಯಿಸಿದಲ್ಲಿ, ಇವುಗಳು ನಿಮಗೆ ಅದರಲ್ಲಿಯೇ ಓದಲು ದೊರೆಯುತ್ತವೆ, ಅಥವಾ ನಿಮ್ಮ ಆ ಸೇವೆಯ ಬಳಕೆಯ ಮೂಲಕ ಲಭ್ಯವಿರುತ್ತವೆ.</p>
36 <p>1.4 ಸೇವೆಗಳನ್ನು ನೀವು ಬಳಸಿಕೊಳ್ಳುವ ಕುರಿತು ಸಾರ್ವತ್ರಿಕ ನಿಯಮಗಳು ಹಾಗೂ ಹೆಚ್ಚುವರಿ ನಿಯಮಗಳು ಜೊತೆಯಾಗಿ ನಿಮ್ಮ ಮತ್ತು Google ನ ಮಧ್ಯೆ ಕಾನೂನುಬದ್ದ ಒಪ್ಪಂದವನ್ನು ನಿರ್ಮಿಸುತ್ತವೆ. ನೀವು ಅವುಗಳನ್ನು ಸಾವಕಾಶವಾಗಿ, ಜಾಗರೂಕತೆಯಿಂದ ಓದುವುದು ಮುಖ್ಯ. ಒಟ್ಟಿನಲ್ಲಿ, ಈ ಕಾನೂನು ಒಪ್ಪಂದವನ್ನು ಕೆಳಗೆ "ನಿಯಮಗಳು" ಎಂದು ಉಲ್ಲೇಖಿಸಲಾಗಿದೆ.</p>
37 <p>1.5 ಒಂದು ವೇಳೆ ಹೆಚ್ಚುವರಿ ನಿಯಮಗಳು ಹಾಗೂ ಸಾರ್ವತ್ರಿಕ ನಿಯಮಗಳ ನಡುವೆ ಭಿನ್ನತೆಯಿದ್ದರೆ ಆಗ ಆ ಸೇವೆಯ ಸಂಬಂಧದಲ್ಲಿ ಹೆಚ್ಚುವರಿ ನಿಯಮಗಳು ಹೆಚ್ಚಿನ ಆದ್ಯತೆ ಪಡೆದುಕೊಳ್ಳುತ್ತವೆ. </p>
38 <p><strong>2. ನಿಯಮಗಳನ್ನು ಅಂಗೀಕರಿಸುವುದು</strong></p>
39 <p>2.1 ಸೇವೆಗಳನ್ನು ಬಳಸುವ ನಿಟ್ಟಿನಲ್ಲಿ, ನೀವು ಮೊದಲು ನಿಯಮಗಳಿಗೆ ಸಮ್ಮತಿಸಬೇಕು. ನೀವು ಈ ನಿಯಮಗಳನ್ನು ಅಂಗೀಕರಿಸದಿದ್ದರೆ ಈ ಸೇವೆಯನ್ನು ಬಳಸಲಾಗುವುದಿಲ್ಲ.</p>
40 <p>2.2 ನೀವು ಈ ನಿಯಮಗಳನ್ನು ಈ ರೀತಿ ಅಂಗೀಕರಿಸಬಹುದು:</p>
41 <p>(A) ಯಾವುದೇ ಸೇವೆಗೆ ಬಳಕೆದಾರ ಇಂಟರ್ಫೇಸ್‌ನಲ್ಲಿ ನಿಮಗಾಗಿ Google ಲಭ್ಯವಾಗಿಸಿದ ನಿಯಮಗಳನ್ನು ಅಂಗೀಕರಿಸುವ ಅಥವಾ ಒಪ್ಪಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ; ಅಥವಾ</p>
42 <p>(B) ಸೇವೆಗಳನ್ನು ನಿಜವಾಗಿಯೂ ಬಳಸುವ ಮೂಲಕ. ಈ ಸಂದರ್ಭದಲ್ಲಿ, ನೀವು ಆ ಕ್ಷಣದಿಂದ ನಿಯಮಗಳನ್ನು ಒಪ್ಪಿಕೊಂಡಿದ್ದೀರಿ ಎಂಬುದಕ್ಕೆ ನೀವು ಸೇವೆಗಳನ್ನು ಬಳಸುತ್ತಿರುವುದೇ ದ್ಯೂತಕ ಎಂದು Google ಪರಿಗಣಿಸುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ</p>
43 <p><strong>3.ನಿಯಮಗಳ ಭಾಷೆಗಳು</strong></p>
44 <p>3.1 ನಿಯಮಗಳ ಇಂಗ್ಲಿಷ್ ಭಾಷಾ ಆವೃತ್ತಿಯ ಭಾಷಾಂತರವನ್ನು Google ನಿಮಗೆ ಒದಗಿಸಿದ್ದಲ್ಲಿ, ಅದನ್ನು ನಿಮ್ಮ ಅನುಕೂಲಕ್ಕಾಗಿ ಮಾತ್ರ ಒದಗಿಸಲಾಗಿದೆ ಹಾಗೂ Google ನೊಂದಿಗಿನ ನಿಮ್ಮ ಸಂಬಂಧವನ್ನು ನಿರ್ಣಯಿಸುವುದು ಮಾತ್ರ ಇಂಗ್ಲಿಷ್ ಆವೃತ್ತಿಗಳೇ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. </p>
45 <p>3.2 ನಿಯಮಗಳ ಇಂಗ್ಲೀಷ್ ಭಾಷಾ ಆವೃತ್ತಿಯ ಮತ್ತು ಅನುವಾದಿಸಿದ ಆವೃತ್ತಿಯ ನಡುವೆ ಏನಾದರೂ ವ್ಯತ್ಯಾಸ ಕಂಡುಬಂದರೆ, ಇಂಗ್ಲಿಷ್ ಭಾಷಾ ಆವೃತ್ತಿಯನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು.</p>
46 <p><strong>4. Google ನಿಂದ ದೊರೆಯುವ ಸೇವೆಗಳ ಸೌಲಭ್ಯಗಳು</strong></p>
47 <p>4.1 Google ಜಗತ್ತಿನಾದ್ಯಂತ ಅಧೀನ ಹಾಗೂ ಸಂಯೋಜಿತ ಕಾನೂನು ಸಂಸ್ಥೆಗಳನ್ನು ("ಅಧೀನ ಸಂಸ್ಥೆಗಳು ಮತ್ತು ಸಂಯೋಜಿತ") ಹೊಂದಿದೆ. ಕೆಲವೊಮ್ಮೆ, ಈ ಕಂಪನಿಗಳು Google ಪರವಾಗಿಯೇ ನಿಮಗೆ ಸೇವೆಗಳನ್ನು ಒದಗಿಸುತ್ತವೆ. ಅಧೀನ ಹಾಗೂ ಸಂಯೋಜಿತ ಸಂಸ್ಥೆಗಳು ನಿಮಗೆ ಸೇವೆ ಒದಗಿಸುವ ಅಧಿಕಾರ ಹೊಂದಿವೆ ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
48 <p>4.2 ತನ್ನ ಬಳಕೆದಾರರಿಗೆ ಸಾಧ್ಯವಿರುವ ಎಲ್ಲ ಶ್ರೇಷ್ಠ ಅನುಭವಗಳನ್ನು ಒದಗಿಸಲು Google ನಿರಂತರವಾಗಿ ಹೊಸ ಅನ್ವೇಷಣೆಗಳನ್ನು ಮಾಡುತ್ತಲೇ ಇರುತ್ತದೆ. Google ಒದಗಿಸುವ ಸೇವೆಗಳ ರೂಪ ಹಾಗೂ ಲಕ್ಷಣಗಳು ಪೂರ್ವಸೂಚನೆ ಇಲ್ಲದೆ, ಕಾಲಕಾಲಕ್ಕೆ ಬದಲಾಗಬಹುದೆಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
49 <p>4.3 ನಿರಂತರ ಬದಲಾವಣೆಯ ಅಂಗವಾಗಿ , Google ತನ್ನ ಸ್ವಯಂ ವಿವೇಚನೆಯಿಂದ, ನಿಮಗೆ ಅಥವಾ ಸಾಮಾನ್ಯ ಬಳಕೆದಾರರಿಗೆ ಪೂರ್ವ ಸೂಚನೆ ನೀಡದೇ, Google ಸೇವೆ ಒದಗಿಸುವುದನ್ನು ನಿಲ್ಲಿಸಬಹುದಾಗಿದೆ (ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ) ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ಯಾವುದೇ ಸಮಯದಲ್ಲಿ ನೀವು ಸೇವೆಯ ಬಳಕೆಯನ್ನು ನಿಲ್ಲಿಸಬಹುದಾಗಿದೆ. ಸೇವೆಗಳ ಬಳಕೆಯನ್ನು ನಿಲ್ಲಿಸುವ ವೇಳೆ ನೀವು Google ಗೆ ನಿರ್ದಿಷ್ಟವಾಗಿ ಮಾಹಿತಿ ನೀಡುವ ಅಗತ್ಯವಿಲ್ಲ.</p>
50 <p>4.4 ನಿಮ್ಮ ಖಾತೆಗೆ ಪ್ರವೇಶವನ್ನು Google ನಿಷ್ಕ್ರಿಯಗೊಳಿಸಿದ್ದರೆ, ಸೇವೆಗಳಿಗೆ ಪ್ರವೇಶವನ್ನು, ನಿಮ್ಮ ಖಾತೆಯ ವಿವರಗಳು ಅಥವಾ ಯಾವುದೇ ಫೈಲ್‌ಗಳು ಅಥವಾ ನಿಮ್ಮ ಖಾತೆಯು ಹೊಂದಿರುವ ಇತರ ಯಾವುದೇ ವಿಷಯಗಳಿಗೆ ಪ್ರವೇಶವನ್ನು ತಡೆಯಲಾಗುವುದು ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
51 <p><strong>5. ನಿಮ್ಮಿಂದ ಸೇವೆಗಳ ಬಳಕೆ</strong></p>
52 <p>5.1 (a) ನಿಬಂಧನೆಗಳು ಮತ್ತು (b) ಯಾವುದೇ ಅನ್ವಯಿತ ಕಾನೂನು, ಶಾಸನ ಅಥವಾ ಸಾಮಾನ್ಯವಾಗಿ ಸ್ವೀಕರಿಸಿರುವ ಅನುಷ್ಠಾನಗಳು ಅಥವಾ ಪ್ರಸ್ತುತ ಅಧಿಕಾರ ವ್ಯಾಪ್ತಿಯಲ್ಲಿರುವ ಮಾರ್ಗಸೂಚಿಗಳು (ಯುನೈಟೆಡ್ ಸ್ಟೇಟ್ಸ್ ಅಥವಾ ಇತರ ಪ್ರಸಕ್ತ ದೇಶಗಳಿಂದ ಮತ್ತು ದೇಶಗಳಿಗೆ ಡೇಟಾ ಅಥವಾ ಸಾಫ್ಟ್‌ವೇರ್‌ಗಳ ಕೊಡು-ಕೊಳ್ಳುವಿಕೆಯ ಯಾವುದೇ ನಿಯಮ ಸೇರಿದಂತೆ) ಅನುಮತಿಸಿದಂತಹ ಉದ್ದೇಶಗಳಿಗೆ ಮಾತ್ರ ಸೇವೆಗಳನ್ನು ಬಳಸಿಕೊಳ್ಳುತ್ತೀರಿ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ</p>
53 <p>5.2 ಸೇವೆಗಳಿಗೆ (ಅಥವಾ ಸೇವೆಗಳಿಗೆ ಸಂಪರ್ಕವಿರುವ ಸರ್ವರ್‌ಗಳು ಮತ್ತು ನೆಟ್‌ವರ್ಕ್‌ಗಳು) ಮಧ್ಯ ಪ್ರವೇಶಿಸುವ ಅಥವಾ ಅವುಗಳಿಗೆ ಅಡ್ಡಿಯುಂಟುಮಾಡುವ ಯಾವುದೇ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.</p>
54 <p>5.3 Google ನೊಂದಿಗೆ ಪ್ರತ್ಯೇಕ ಒಪ್ಪಂದದ ವಿನಹ, ಯಾವುದೇ ಉದ್ದೇಶಕ್ಕಾಗಿ ಸೇವೆಗಳ ಪುನರುತ್ಪಾದನೆ, ನಕಲು, ಪ್ರತಿ, ಮಾರಾಟ, ವ್ಯಾಪಾರ ಅಥವಾ ಮರು ಮಾರಾಟ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.</p>
55 <p>5.4 ನಿಯಮಗಳಡಿಯಲ್ಲಿನ ನಿಮ್ಮ ಬದ್ಧತೆಗಳ ಉಲ್ಲಂಘನೆಗೆ ಮತ್ತು ಅದರಿಂದುಂಟಾದ ಯಾವುದೇ ಪರಿಣಾಮಗಳಿಗೆ ನೀವೇ ಜವಾಬ್ದಾರರು (ಮತ್ತು ನಿಮ್ಮ ಅಥವಾ ಇನ್ನಾವುದೇ ಮೂರನೇ ವ್ಯಕ್ತಿಯನ್ನು ಕುರಿತಂತೆ ಯಾವುದೇ ರೀತಿಯಿಂದಲೂ Google ಜವಾಬ್ದಾರಿ ಹೊಂದಿರುವುದಿಲ್ಲ ) ಎಂಬುದನ್ನು ನೀವು ಒಪ್ಪುತ್ತೀರಿ.</p>
56 <p><strong>6. ಗೌಪ್ಯತೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ</strong></p>
57 <p>6.1 Google ನ ಡೇಟಾ ರಕ್ಷಣಾ ಕ್ರಮಗಳ ಕುರಿತ ಮಾಹಿತಿಗಾಗಿ, ದಯವಿಟ್ಟು Google ನ ಗೌಪ್ಯತೆ ನೀತಿಯನ್ನು http://www.google.com/privacy.html ಮತ್ತು http://www.google.com/chrome/intl/en/privacy.html ರಲ್ಲಿ ಓದಿ. ನೀವು ಸೇವೆಗಳನ್ನು ಬಳಸುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು Google ಯಾವ ರೀತಿ ಬಳಸಿಕೊಳ್ಳುತ್ತದೆ, ಮತ್ತು ನಿಮ್ಮ ಗೌಪ್ಯತೆಗಳನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಈ ನೀತಿ ವಿವರಿಸುತ್ತದೆ.</p>
58 <p>6.2 Googleನ ಗೌಪ್ಯತಾ ನೀತಿಗಳಿಗೆ ಅನುಸಾರವಾಗಿ ನಿಮ್ಮ ಡೇಟಾಗಳನ್ನು ಬಳಸಲು ನೀವು ಒಪ್ಪುತ್ತೀರಿ.</p>
59 <p><strong>7. ಸೇವೆಗಳಲ್ಲಿರುವ ವಿಷಯ</strong></p>
60 <p>7.1 ಸೇವೆಗಳ ಭಾಗವಾಗಿ, ಅಥವಾ ನಿಮ್ಮ ಬಳಕೆಯ ಮೂಲಕ ನೀವು ಪ್ರವೇಶಿಸಬೇಕಾಗುವ ಎಲ್ಲ ಮಾಹಿತಿಗಳು (ಡೇಟಾ ಫೈಲ್‌ಗಳು, ಲಿಖಿತ ಪಠ್ಯ, ಕಂಪ್ಯೂಟರ್ ಸಾಫ್ಟ್‌ವೇರ್, ಸಂಗೀತ, ಆಡಿಯೋ ಫೈಲ್‌ಗಳು ಅಥವಾ ಇತರ ಧ್ವನಿಗಳು, ಛಾಯಾಚಿತ್ರಗಳು, ವಿಡಿಯೋ ಅಥವಾ ಇತರ ಇಮೇಜ್‌ಗಳು), ಯಾವ ವ್ಯಕ್ತಿಯಿಂದ ಸೃಷ್ಟಿಯಾಗಿವೆಯೋ ಅವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂಬುದನ್ನು ನೀವು ತಿಳಿದಿದ್ದೀರಿ. ಅಂತಹ ಎಲ್ಲಾ ಮಾಹಿತಿಗಳನ್ನು "ವಿಷಯ" ಎಂಬುದಾಗಿ ಕೆಳಗೆ ಉಲ್ಲೇಖಿಸಲಾಗಿದೆ .</p>
61 <p>7.2 ಸೇವೆಗಳಲ್ಲಿರುವ ಜಾಹೀರಾತುಗಳು ಮತ್ತು ಅಷ್ಟೇ ಅಲ್ಲದೇ ಸೇವೆಗಳ ಒಳಗಿನ, ಸೇವೆಗಳ ಒಂದು ಭಾಗವಾಗಿ ನಿಮಗೆ ಪರಿಚಯಿಸಲಾಗುವ ಇತರ ವಿಷಯಗಳು Google (ಅಥವಾ ಅವರ ಪರವಾಗಿ ಇತರ ವ್ಯಕ್ತಿಗಳು ಅಥವಾ ಕಂಪನಿಗಳು) ಗೆ ವಿಷಯವನ್ನು ಒದಗಿಸುವ ಪ್ರಾಯೋಜಕರು ಅಥವಾ ಜಾಹೀರಾತುಗಾರರ ವಶಕ್ಕೆ ಒಳಪಟ್ಟ ಬೌದ್ದಿಕ ಆಸ್ತಿಯ ಹಕ್ಕುಗಳಿಂದ ರಕ್ಷಿಸಲ್ಪಟ್ಟಿರುತ್ತವೆ, ಎಂದು ನೀವು ಅರಿತಿರಬೇಕು. ನಿಮಗೆ ನಿರ್ದಿಷ್ಟವಾಗಿ Google ನಿಂದ ಅಥವಾ ಆ ವಿಷಯದ ಮಾಲೀಕರಿಂದ ಪ್ರತ್ಯೇಕವಾದ ಒಪ್ಪಂದದಿಂದ ನೀವು ನಿರ್ದೇಶನವನ್ನು ಪಡೆಯದ ಹೊರತು ನೀವು ಈ ವಿಷಯವನ್ನು ಬಳಸಿಕೊಂಡು ಹೊಸ ಉತ್ಪನ್ನವನ್ನು (ಪೂರ್ಣವಾಗಿ ಅಥವಾ ಒಂದು ಭಾಗವಾಗಿ)ಮಾರ್ಪಡಿಸುವಂತಿಲ್ಲ, ಅದನ್ನು ಬಾಡಿಗೆಗೆ ನೀಡುವುದು, ಗುತ್ತಿಗೆ, ಸಾಲ, ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ.</p>
62 <p>7.3 ಯಾವುದೇ ಸೇವೆಯಿಂದ ಯಾವುದೇ ಅಥವಾ ಎಲ್ಲಾ ವಿಷಯಗಳ ಪೂರ್ವಪ್ರದರ್ಶನ, ಪರಾಮರ್ಶೆ, ಫ್ಲ್ಯಾಗ್, ಫಿಲ್ಟರ್, ನವೀಕರಣ, ನಿರಾಕರಣೆ ಮಾಡುವ ಅಥವಾ ತೆಗೆದುಹಾಕುವ ಹಕ್ಕನ್ನು (ಆದರೆ, ಯಾವುದೇ ಬಾಧ್ಯತೆ ಹೊಂದದೇ) Google ಕಾಯ್ದಿರಿಸಿಕೊಂಡಿದೆ. ಕೆಲವೊಂದು ಸೇವೆಗಳಿಗೆ, ಲೈಂಗಿಕ ವಿಷಯಗಳನ್ನು ಫಿಲ್ಟರ್ ಮಾಡಲು Google ಪರಿಕರಗಳನ್ನು ಒದಗಿಸಬಹುದು. ಈ ಪರಿಕರಗಳು ಸುರಕ್ಷಿತ ಹುಡುಕಾಟ ಆದ್ಯತಾ ಸೆಟ್ಟಿಂಗ್‌ಗಳನ್ನು ಒಳಗೊಂಡಿವೆ (http://www.google.com/help/customize.html#safe ನೋಡಿ). ಹೆಚ್ಚುವರಿಯಾಗಿ, ನಿಮಗೆ ಆಕ್ಷೇಪಣಾರ್ಹ ಎಂಬಂತೆ ಕಂಡುಬರುವ ವಸ್ತುಗಳಿಗೆ ಪ್ರವೇಶವನ್ನು ಮಿತಿಗೊಳಿಸಲು ವಾಣಿಜ್ಯವಾಗಿ ಲಭ್ಯವಾಗುವ ಸೇವೆಗಳು ಮತ್ತು ಸಾಫ್ಟ್‌ವೇರ್‌ಗಳಿವೆ.</p>
63 <p>7.4 ನೀವು ಸೇವೆಗಳನ್ನು ಬಳಸುವಾಗ ರೇಗಿಸುವಂತಹ, ಅಸಭ್ಯ ಅಥವಾ ಆಕ್ಷೇಪಣಾರ್ಹ ವಿಷಯಗಳಿಗೆ ನೀವು ತೆರೆದುಕೊಳ್ಳಬಹುದು, ಆ ರೀತಿ ಆದಲ್ಲಿ, ನೀವು ಸೇವೆಗಳನ್ನು ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಬಳಸುತ್ತೀರೆಂದು ಅರ್ಥಮಾಡಿಕೊಳ್ಳಬೇಕು.</p>
64 <p>7.5 ಈ ಸೇವೆಗಳನ್ನು ಬಳಸಿ ರಚಿಸುವ ಯಾವುದೇ ವಿಷಯ, ಅದರ ಪ್ರಸಾರ ಅಥವಾ ಪ್ರದರ್ಶನಕ್ಕೆ ನೀವೇ ಜವಾಬ್ದಾರರು (ಮತ್ತು ನಿಮ್ಮ ಅಥವಾ ಇನ್ನಾವುದೇ ಮೂರನೇ ವ್ಯಕ್ತಿಯನ್ನು ಕುರಿತಂತೆ ಯಾವುದೇ ರೀತಿಯಿಂದಲೂ Google ಜವಾಬ್ದಾರಿ ಹೊಂದಿರುವುದಿಲ್ಲ) ನಿಮ್ಮ ಈ ಕ್ರಿಯೆಗಳಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೂ (Google ಅನುಭವಿಸುವ ಯಾವುದೇ ನಷ್ಟ ಅಥವಾ ಹಾನಿ ಒಳಗೊಂಡಂತೆ) ನೀವೇ ಹೊಣೆಗಾರರೆಂದು ನೀವು ಒಪ್ಪುತ್ತೀರಿ.</p>
65 <p><strong>8. ಮಾಲೀಕತ್ವ ಹಕ್ಕುಗಳು</strong></p>
66 <p>8.1 ಸೇವೆಗಳಲ್ಲಿ ಇರುವಂತಹ ಭೌತಿಕ ಆಸ್ತಿ ಹಕ್ಕುಗಳು (ಆ ಹಕ್ಕುಗಳು ನೋಂದಾಯಿಸಿರಬಹುದು ಅಥವಾ ಇಲ್ಲದಿರಬಹುದು, ಮತ್ತು ಆ ಹಕ್ಕು ಪ್ರಪಂಚದ ಯಾವ ಭಾಗದಲ್ಲಿಯಾದರೂ ಇರಬಹುದು) ಸೇರಿದಂತೆ ಎಲ್ಲಾ ಕಾನೂನು ಹಕ್ಕುಗಳ, ಶೀರ್ಷಿಕೆಗಳ ಮತ್ತು ಹಿತಾಸಕ್ತಿಗಳನ್ನು Google (ಅಥವಾ Google ನ ಪರವಾನಿಗಿದಾರರು) ಹೊಂದಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
67 <p>8.2 ನೀವು Google ನೊಂದಿಗೆ ಲಿಖಿತ ಒಪ್ಪಂದ ಮಾಡಿಕೊಂಡಿರದಿದ್ದಲ್ಲಿ, ನಿಮಗೆ Google ನವರ ವ್ಯಾಪಾರ ಹೆಸರುಗಳು, ವ್ಯಾಪಾರ ಮುದ್ರೆ, ಸೇವಾ ಮುದ್ರೆ, ಲೋಗೋಗಳು, ಡೊಮೇನ್ ಹೆಸರುಗಳು ಮತ್ತು ಇತರ ವಿಶಿಷ್ಟ ಬ್ರ್ಯಾಂಡ್ ವೈಶಿಷ್ಯ್ಟಗಳನ್ನು ಬಳಸುವ ಹಕ್ಕು ಇರುವುದಿಲ್ಲ.</p>
68 <p>8.3 Google ನೊಂದಿಗೆ ಪ್ರತ್ಯೇಕವಾದ ಲಿಖಿತ ಒಪ್ಪಂದವೊಂದರಲ್ಲಿ ಇವುಗಳಲ್ಲಿ ಯಾವುದಾದರೊಂದು ಬ್ರ್ಯಾಂಡ್ ವೈಶಿಷ್ಟ್ಯಗಳನ್ನು ಬಳಸಲು ವ್ಯಕ್ತವಾದ ಹಕ್ಕನ್ನು ನಿಮಗೆ ನೀಡಿದರೆ, ಅಂತಹ ವೈಶಿಷ್ಟ್ಯಗಳ ಬಳಕೆಯು ಆ ಒಪ್ಪಂದದ, ನಿಯಮಗಳ ಅನ್ವಯಿತ ಸೌಲಭ್ಯಗಳ, ಮತ್ತು Google ನವರ ಬ್ರ್ಯಾಂಡ್ ವೈಶಿಷ್ಟ್ಯವು ಸಮಯಕ್ಕೆ ನವೀಕರಿಸಿದ ಮಾರ್ಗಸೂಚಿಗಳನ್ನು ಅನುವರ್ತಿಸುತ್ತದೆ ಎಂದು ಒಪ್ಪಿಕೊಳ್ಳುತ್ತೀರಿ. ಈ ಮಾರ್ಗಸೂಚಿಗಳನ್ನು http://www.google.com/permissions/guidelines.html ರಲ್ಲಿ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು (ಅಥವಾ ಈ ಉದ್ದೇಶಕ್ಕಾಗಿ ಕಾಲಾನುಕ್ರಮಕ್ಕೆ ತಕ್ಕಂತೆ Google ಒದಗಿಸಬಹುದಾದಂತಹ ಇತರ URL ಗಳು)</p>
69 <p>8.4 ಈ ನಿಯಮಗಳ ಪ್ರಕಾರ ನೀವು (ಅಥವಾ ನಿಮ್ಮ ಪರವಾನಗಿದಾರರು) ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ ನೀವು ಸಲ್ಲಿಸಿದ, ಪೋಸ್ಟ್ ಮಾಡಿದ, ಪ್ರಸಾರ ಮತ್ತು ಪ್ರದರ್ಶನಗಳ ಮೇಲೆ Google ಯಾವುದೇ ಹಕ್ಕು, ಶೀರ್ಷಿಕೆ, ಅಥವಾ ಆಸಕ್ತಿಯನ್ನು ಹೊಂದಿಲ್ಲ ಎಂಬುದನ್ನು Google ತಿಳಿದಿದೆ ಮತ್ತು ಒಪ್ಪಿದೆ. (ಆ ಹಕ್ಕುಗಳು ನೋಂದಣಿ ಆಗಿದೆಯೋ ಅಥವಾ ಇಲ್ಲವೋ, ಮತ್ತು ಜಗತ್ತಿನ ಎಲ್ಲೇ ಆದರೂ ಆ ಹಕ್ಕುಗಳು ಅಸ್ತಿತ್ವದಲ್ಲಿರಬಹುದು) ಲಿಖಿತ ಒಪ್ಪಂದವಿಲ್ಲದಿದ್ದರೆ, ಆ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಜಾರಿಗೆ ತರಲು ನೀವೇ ಜವಾಬ್ದಾರರು ಮತ್ತು ನಿಮ್ಮ ಪರವಾಗಿ ಅವುಗಳನ್ನು ರಕ್ಷಿಸಲು Google ಗೆ ಯಾವುದೇ ಭಾದ್ಯತೆಯಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.</p>
70 <p>8.5 ನೀವು ಸೇವೆಗಳಲ್ಲಿ ಲಗತ್ತಿಸಿದ ಅಥವಾ ಸೇರಿಸಿರುವಂತಹ ಯಾವುದೇ ಮಾಲೀಕತ್ವ ಹಕ್ಕುಗಳ ಪ್ರಕಟಣೆಗಳನ್ನು (ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ಪ್ರಕಟಣೆಗಳನ್ನು ಒಳಗೊಂಡಂತೆ) ತೆಗೆದು ಹಾಕುವುದು, ಅಸ್ಪಷ್ಟಗೊಳಿಸುವುದು, ಮತ್ತು ಬದಲಾಯಿಸುವುದಾಗಲೀ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ.</p>
71 <p>8.6 ನೀವು Google ನಿಂದ ಲಿಖಿತವಾಗಿ ವ್ಯಕ್ತ ಅಧಿಕಾರ ಪಡೆಯದ ಹೊರತು, ನೀವು ಈ ಸೇವೆಯನ್ನು ಬಳಸುವುದರ ಮೂಲಕ, ಯಾವುದೇ ವ್ಯಾಪಾರ ಮುದ್ರೆ, ಸೇವಾ ಮುದ್ರೆ, ವ್ಯಾಪಾರ ಹೆಸರು, ಯಾವುದೇ ಕಂಪನಿ ಅಥವಾ ಸಂಸ್ಥೆಯ ಲೋಗೊಗಳನ್ನು ಬಳಸುವುದಿಲ್ಲ ಅಥವಾ ಅಂತಹ ಮುದ್ರೆಗಳು, ಹೆಸರುಗಳು ಅಥವಾ ಲೋಗೊಗಳನ್ನು ಬಳಸುವ ಮಾಲೀಕರು ಅಥವಾ ಅಧಿಕೃತ ಬಳಕೆದಾರರ ಕುರಿತು ಗೊಂದಲಕ್ಕೆ ಆಸ್ಪದ ನೀಡುವುದಿಲ್ಲವೆಂಬುದನ್ನು ನೀವು ಒಪ್ಪುತ್ತೀರಿ.</p>
72 <p>8.7 ಈ ಉತ್ಪನ್ನ ಗ್ರಾಹಕರ ವೈಯಕ್ತಿಕ ಮತ್ತು ವಾಣಿಜ್ಯವಲ್ಲದ ಬಳಕೆಗಾಗಿ AVC ಪೇಟೆಂಟ್ ಪೋರ್ಟ್‌ಫೋಲಿಯೊ ಅಡಿಯಲ್ಲಿ ಈ ಕೆಳಗಿನವುಗಳಿಗೆ ಪರವಾನಗಿ ಪಡೆದಿದೆ. (i) AVC ಪ್ರಮಾಣಿತದ ಮೇರೆಗೆ (“AVC ವೀಡಿಯೊ”) ವೀಡಿಯೊವನ್ನು ಎನ್‌ಕೋಡ್ ಮಾಡಲು ಮತ್ತು/ಅಥವಾ (ii) ವೈಯಕ್ತಿಕ ಮತ್ತು ವಾಣಿಜ್ಯವಲ್ಲದ ಚಟುವಟಿಕೆಯಲ್ಲಿ ಗ್ರಾಹಕರಿಂದ ಎನ್‌ಕೋಡ್ ಮಾಡಲಾದ AVC ವೀಡಿಯೊವನ್ನು ಮತ್ತು/ಅಥವಾ AVC ವೀಡಿಯೊವನ್ನು ಒದಗಿಸಲು ವೀಡಿಯೊ ಪಾಲುದಾರರಿಂದ ಪಡೆದುಕೊಳ್ಳಲಾದ ಪರವಾನಗಿಯನ್ನು ಡೀಕೋಡ್ ಮಾಡಲು. ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಇತರ ಬಳಕೆಗೆ ಅನ್ವಯಿಸಲಾಗುವುದಿಲ್ಲ. ಹೆಚ್ಚುವರಿ ಮಾಹಿತಿಯನ್ನು MPEG LA, L.L.C. ಯಿಂದ ಪಡೆದುಕೊಳ್ಳಬಹುದಾಗಿದೆ HTTP://WWW.MPEGLA.COM ನೋಡಿ. </p>
73 <p><strong>9. Google ನಿಂದ ಪರವಾನಗಿ</strong></p>
74 <p>9.1 Google ನಿಂದ ನಿಮಗೆ ಒದಗಿಸಲಾದಂತಹ ಸೇವೆಯ ಭಾಗವಾಗಿ ನಿಮಗೆ ಒದಗಿಸಲಾದ ಸಾಫ್ಟ್‌ವೇರ್ ಅನ್ನು ವೈಯಕ್ತಿಕವಾಗಿ, ಜಗತ್ತಿನಾದ್ಯಂತ, ರಾಯಲ್ಟಿ-ಮುಕ್ತವಾಗಿ, ಹಸ್ತಾಂತರಿಸಲಾಗದ ಮತ್ತು ವಿಶೇಷವಲ್ಲದ ಪರವಾನಗಿಯನ್ನು Google ನಿಮಗೆ ನೀಡುತ್ತದೆ (ಕೆಳಗೆ "ಸಾಫ್ಟ್‌ವೇರ್" ಎಂದು ಉಲ್ಲೇಖಿಸಲಾಗಿದೆ). ನಿಯಮಗಳ ಅನುಮತಿಯ ಮೇರೆಗೆ Google ನಿಂದ ಒದಗಿಸಲಾದ ಸೇವೆಗಳ ಬಳಕೆ ಹಾಗೂ ಅದರ ಅನುಕೂಲದ ಅನುಭವವನ್ನು ನಿಮಗೆ ಲಭ್ಯವಾಗಿಸುವುದು ಈ ಪರವಾನಗಿಯ ಏಕಮಾತ್ರ ಉದ್ದೇಶವಾಗಿದೆ.</p>
75 <p>9.2 ಪರಿಚ್ಛೇದ 1.2 ಕ್ಕೆ ಅನ್ವಯವಾಗುವಂತೆ, ನಿಮಗೆ ಇದನ್ನು ವ್ಯಕ್ತವಾಗಿ ಅನುಮತಿಸದೆ ಅಥವಾ ನಿಯಮದಿಂದ ಆದೇಶಿಸದಿದ್ದರೆ, ಅಥವಾ ನೀವು ನಿರ್ದಿಷ್ಟವಾಗಿ Google ಗೆ ಲಿಖಿತ ರೂಪದಲ್ಲಿ ಈ ರೀತಿ ಮಾಡಲು ಹೇಳಿರದಿದ್ದರೆ, ನೀವು ಸಾಫ್ಟ್‌ವೇರ್‌ನ ಮೂಲ ಕೋಡ್ ಅಥವಾ ಅದರ ಯಾವುದಾದರೊಂದು ಭಾಗವನ್ನು ಸಂಗ್ರಹಿಸಲು ಪ್ರಯತ್ನಿಸುವುದು ಅಥವಾ ಅದನ್ನು ನಕಲಿಸಲು, ಮಾರ್ಪಾಟು ಮಾಡಲು, ಅದರ ಉತ್ಪನ್ನವನ್ನು ರಚಿಸುವುದು, ರಿವರ್ಸ್ ಇಂಜಿನಿಯರ್, ಅಸಂಕಲಿಸುವುದನ್ನು ನೀವು ಮಾಡುವಂತಿಲ್ಲ (ಮತ್ತು ಇತರರನ್ನು ಮಾಡಲು ಅನುಮತಿಸುವಂತಿಲ್ಲ).</p>
76 <p>9.3 ಪರಿಚ್ಛೇದ 1.2 ಕ್ಕೆ ಅನ್ವಯವಾಗುವಂತೆ, ನೀವು ಹೀಗೆ ಮಾಡಬಹುದೆಂದು Google ನಿಮಗೆ ನಿರ್ದಿಷ್ಟವಾಗಿ ಲಿಖಿತ ಅನುಮತಿ ನೀಡಿರದಿದ್ದರೆ, ಸಾಫ್ಟ್‌ವೇರ್ ಬಳಸುವ ಹಕ್ಕನ್ನು (ಅಥವಾ ಉಪ ಪರವಾನಗಿಯ ಪೂರೈಕೆ) ನಿಮಗೆ ನಿಯೋಜಿಸಲಾಗುವುದಿಲ್ಲ, ಸಾಫ್ಟ್‌ವೇರ್ ಬಳಕೆಯ ಸುರಕ್ಷಾ ಹಿತಾಸಕ್ತಿಯನ್ನು ನಿಮ್ಮ ಹಕ್ಕಿನ ಮೇಲೆ ಪೂರೈಸಲು, ಅಥವಾ ಸಾಫ್ಟ್‌ವೇರ್‌ ಬಳಕೆಯ ಕುರಿತ ನಿಮ್ಮ ಹಕ್ಕಿನ ಯಾವುದೇ ಭಾಗವನ್ನು ವರ್ಗಾವಣೆ ಮಾಡುವಂತಿಲ್ಲ.</p>
77 <p><strong>10. ನಿಮ್ಮಿಂದ ವಿಷಯದ ಪರವಾನಗಿ</strong></p>
78 <p>10.1 ನೀವು ಸೇವೆಯಿಂದ ಅಥವಾ ಸೇವೆಯ ಮೂಲಕ ಸಲ್ಲಿಸುವ, ಪೋಸ್ಟ್ ಮಾಡುವ ಅಥವಾ ಪ್ರದರ್ಶಿಸುವ ವಿಷಯಕ್ಕೆ ಈಗಾಗಲೇ ಕೃತಿಸ್ವಾಮ್ಯ ಮತ್ತು ಇತರ ಹಕ್ಕುಗಳನ್ನು ನೀವು ಉಳಿಸಿಕೊಂಡಿದ್ದೀರಿ.</p>
79 <p><strong>11. ಸಾಫ್ಟ್‌ವೇರ್ ನವೀಕರಣಗಳು</strong></p>
80 <p>11.1 ನೀವು ಬಳಸುವ ಸಾಫ್ಟ್‌ವೇರ್ Google ನಿಂದ ಕಾಲಕಾಲಕ್ಕೆ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು ಮತ್ತು ನವೀಕರಣಗಳನ್ನು ಸ್ಥಾಪಿಸಬಹುದು. ಈ ನವೀಕರಣಗಳು ಅಭಿವೃದ್ಧಿ, ವಿಸ್ತರಣೆ ಮತ್ತು ಸೇವೆಗಳ ಮತ್ತಷ್ಟು ಬೆಳವಣಿಗೆಗಾಗಿ ವಿನ್ಯಾಸ ಮಾಡಲಾಗಿದ್ದು, ಮತ್ತು ಕೆಲವೊಮ್ಮೆ ಬಗ್ ದುರಸ್ತಿಮಾಡಲು, ವರ್ಧಿತ ಕ್ರಿಯೆಗಳು, ಹೊಸ ಸಾಫ್ಟ್‌ವೇರ್ ಮಾಡ್ಯೂಲ್‌ಗಳು ಮತ್ತು ಸಂಪೂರ್ಣ ಹೊಸ ಆವೃತ್ತಿಗಳ ರೂಪವನ್ನು ಪಡೆದುಕೊಳ್ಳುತ್ತವೆ. ನಿಮ್ಮ ಸೇವೆಗಳ ಬಳಕೆಯ ಭಾಗವೆಂಬಂತೆ ನೀವು ಇಂತಹ ನವೀಕರಣಗಳನ್ನು (ಮತ್ತು ನಿಮಗೆ ಇದನ್ನು ಒದಗಿಸಲು Google ಗೆ ಅನುಮತಿ ನೀಡಬೇಕು) ಸ್ವೀಕರಿಸಲು ಒಪ್ಪುತ್ತೀರಿ.</p>
81 <p><strong>12. Google ನೊಂದಿಗೆ ನಿಮ್ಮ ಸಂಬಂಧವನ್ನು ಕೊನೆಗೊಳಿಸುವಿಕೆ</strong></p>
82 <p>12.1 ಕೆಳಗೆ ನೀಡಿದಂತೆ ನಿಯಮಗಳಿಗೆ ನೀವು ಅಥವಾ Google ಅಂತ್ಯ ಹಾಡುವವರೆಗೆ ಅವುಗಳ ಅನ್ವಯವು ಮುಂದುವರಿಯುವುದು. </p>
83 <p>12.2 Google ಯಾವುದೇ ಸಮಯದಲ್ಲಿ ನಿಮ್ಮೊಂದಿಗಿರುವ ಅದರ ಕಾನೂನು ಒಪ್ಪಂದವನ್ನು ಮುಕ್ತಾಯಗೊಳಿಸಬಹುದು ಅಂದರೆ:</p>
84 <p>(A) ನೀವು ನಿಯಮಗಳ ಯಾವುದೇ ಕರಾರುಗಳನ್ನು ಉಲ್ಲಂಘಿಸಿದ್ದರೆ (ಅಥವಾ ನಿಮಗೆ ನಿಯಮಗಳ ಕರಾರುಗಳನ್ನು ಅನುವರ್ತಿಸುವ ಉದ್ದೇಶವಿಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದರೆ, ಅಥವಾ ನಿಯಮಗಳ ಕರಾರುಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ); ಅಥವಾ</p>
85 <p>(B) ನಿಯಾಮಾನುಸಾರ Google ಗೆ ಇದನ್ನು ಮಾಡಬೇಕಾದ ಅವಶ್ಯಕತೆ ಬಂದರೆ (ಉದಾಹರಣೆಗೆ, ನಿಮಗಿರುವ ಸೇವೆಗಳ ಒದಗಿಸುವಿಕೆ ಕಾನೂನು ಬಾಹಿರವಾದರೆ); ಅಥವಾ</p>
86 <p>(C) ಯಾರ ಪಾಲುದಾರಿಕೆಯಲ್ಲಿ Google ನಿಮಗೆ ಸೇವೆಯನ್ನು ನೀಡಿದೆಯೋ ಅವರು Google ನೊಂದಿಗೆ ಇರುವ ಸಂಬಂಧವನ್ನು ಮುಕ್ತಾಯಗೊಳಿಸಿದ್ದರೆ ಅಥವಾ ನಿಮಗಿರುವ ಸೇವೆಗಳನ್ನು ನಿಲ್ಲಿಸಿದ್ದರೆ; ಅಥವಾ</p>
87 <p>(D) ನೀವು ವಾಸಿಸುವ ಅಥವಾ ಸೇವೆಗಳನ್ನು ಬಳಸುವ ದೇಶದಲ್ಲಿ ಇನ್ನು ಮುಂದೆ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವುದನ್ನು Google ಬದಲಾಯಿಸಿದ್ದರೆ; ಅಥವಾ</p>
88 <p>(E) Google ಅಭಿಪ್ರಾಯದಂತೆ, Google ಸೇವೆಯ ಒದಗಿಸುವಿಕೆ, ಇನ್ನು ಮುಂದೆ ವಾಣಿಜ್ಯಿಕವಾಗಿ ಸುಗಮವಾಗಿರದಿದ್ದರೆ.</p>
89 <p>12.3 ಈ ಪರಿಚ್ಛೇದದಲ್ಲಿರುವ ಯಾವುದೂ ನಿಯಮಗಳ ಪರಿಚ್ಛೇದ 4ರಡಿಯಲ್ಲಿನ ಸೇವೆಗಳ ಸೌಲಭ್ಯ ಸಂಬಂಧಿತ Google ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.</p>
90 <p>12.4 ಈ ನಿಬಂಧನೆಗಳು ಮುಗಿಯುವಾಗ, ಎಲ್ಲಾ ಕಾನೂನು ಹಕ್ಕುಗಳು, ನೀವು ಮತ್ತು Google ಪ್ರಯೋಜನ ಪಡೆದಂತಹ ಕರ್ತವ್ಯ ಮತ್ತು ಭಾದ್ಯತೆಗಳಿಗೆ (ಅಥವಾ ನಿಬಂಧನೆಗಳು ಚಾಲ್ತಿಯಲ್ಲಿರುವಾಗ ಕಾಲಾಂತರದಲ್ಲಿ ಹೆಚ್ಚಾದರೆ) ಅಥವಾ ಅವುಗಳು ಅನಿರ್ದಿಷ್ಟವಾಗಿ ಮುಂದುವರಿಸಲು ವ್ಯಕ್ತಪಡಿಸಿದರೆ, ಈ ನಿಲುಗಡೆಯಿಂದಾಗಿ ಪರಿಣಾಮವಾಗುವುದಿಲ್ಲ, ಮತ್ತು ಪ್ಯಾರಾಗ್ರಾಫ್ 19.7 ರ ಸೌಲಭ್ಯಗಳು ಇಂತಹ ಹಕ್ಕುಗಳಿಗೆ, ಕರ್ತವ್ಯಗಳಿಗೆ ಮತ್ತು ಬಾಧ್ಯತೆಗಳಿಗೆ ಅನಿರ್ದಿಷ್ಟವಾಗಿ ಅನ್ವಯವಾಗುವುವು.</p>
91 <p><strong>13. ವಾರಂಟಿಗಳ ಪ್ರತ್ಯೇಕಿಸುವಿಕೆ</strong></p>
92 <p>13.1 ಪರಿಚ್ಛೇದ 13 ಮತ್ತು 14 ಅನ್ನು ಸೇರಿಸಿದಂತೆ ಈ ನಿಯಮಗಳಲ್ಲಿ ಯಾವುದೂ GOOGLE ನವರ, ಅನ್ವಯಿಸಲ್ಪಡುವ ಕಾನೂನಿನ ಪ್ರಕಾರವಾಗಿ ಪ್ರತ್ಯೇಕಿಸುವ, ವಾರಂಟಿಯನ್ನು ಅಥವಾ ನಷ್ಟದ ಬಾಧ್ಯತೆಗಳನ್ನು ಹೊರತಾಗಿಸುವುದನ್ನು ಅಥವಾ ಮಿತಗೊಳಿಸುವುದನ್ನು ಮಾಡಲಾರದು. ನಿರ್ಲಕ್ಷ್ಯ, ಒಪ್ಪಂದ ಉಲ್ಲಂಘನೆ ಅಥವಾ ಪರೋಕ್ಷವಾಗಿ ಅನ್ವಯವಾಗುವ ನಿಯಮಗಳ ಉಲ್ಲಂಘನೆಯಿಂದ ಉಂಟಾದ ಹಾನಿ ಅಥವಾ ಪ್ರಾಸಂಗಿಕ ಅಥವಾ ಸಾಂದರ್ಭಿಕ ಹಾನಿಗಳಿಗೆ ಅಥವಾ ನಷ್ಟಕ್ಕೆ ಕೆಲವು ನ್ಯಾಯಾಲಯಗಳ ವ್ಯಾಪ್ತಿಗಳು ಕೆಲವು ನಿರ್ದಿಷ್ಟ ಖಾತರಿಗಳು ಮತ್ತು ಪರಿಸ್ಥಿತಿಗಳನ್ನು ಹೊರಗಿಡಲು ಅಥವಾ ಹೊಣೆಗಾರಿಕೆಯ ಮಿತಿ ಮತ್ತು ಹೊರಗಿಡುವಿಕೆಗೆ ಅನುಮತಿ ನೀಡುವುದಿಲ್ಲ. ಅಂತೆಯೇ, ನಿಮ್ಮ ನ್ಯಾಯಾಲಯ ವ್ಯಾಪ್ತಿಯಲ್ಲಿ ಕಾನೂನು ಬದ್ದವಾಗಿರುವ ಮಿತಿಗಳು ಮಾತ್ರ ನಿಮಗೆ ಅನ್ವಯವಾಗುತ್ತವೆ ಮತ್ತು ನಿಮ್ಮ ಹೊಣೆಗಾರಿಕೆಯ ಮಿತಿಯು ಕಾನೂನು ಸಮ್ಮತವಾದ ಗರಿಷ್ಠ ಮಟ್ಟಕ್ಕೆ ಸೀಮಿತವಾಗಿರುತ್ತದೆ.</p>
93 <p>13.2 ನಿಮ್ಮ ಸೇವೆಯ ಬಳಕೆಗೆ ನೀವೇ ಪೂರ್ಣ ಜವಾಬ್ದಾರಿ ಮತ್ತು ಆ ಸೇವೆಗಳು &quot;ಇದ್ದದ್ದು ಇದ್ದಂತೆ&quot; ಮತ್ತು &quot;ಲಭ್ಯವಿರುವಂತೆ&quot; ಒದಗಿಸಲಾಗಿದೆ ಎಂಬುದನ್ನು ವ್ಯಕ್ತವಾಗಿ ತಿಳಿದಿದ್ದೀರಿ ಮತ್ತು ಒಪ್ಪುತ್ತೀರಿ.</p>
94 <p>13.3 ನಿರ್ದಿಷ್ಟವಾಗಿ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು, ಹಾಗೂ ಅದರ ಪರವಾನಗಿದಾರರು ಈ ಕೆಳಗಿನಂತೆ ನಿಮ್ಮನ್ನು ಪ್ರತಿನಿಧಿಸುವುದಿಲ್ಲ ಅಥವಾ ಪ್ರಮಾಣೀಕರಿಸುವುದಿಲ್ಲ:</p>
95 <p>(A) ಸೇವೆಗಳ ಬಳಕೆಯು ನಿಮ್ಮ ಆವಶ್ಯಕತೆಗಳನ್ನು ಪೂರೈಸುತ್ತದೆ,</p>
96 <p>(B) ನಿಮ್ಮಿಂದ ಸೇವೆಗಳ ಬಳಕೆಯು ಅಡ್ಡಿಯಿಲ್ಲದ, ಸಕಾಲಿಕವಾಗಿರುತ್ತದೆ, ಸುರಕ್ಷಿತ ಅಥವಾ ದೋಷ ಮುಕ್ತವಾಗಿರುತ್ತದೆ,</p>
97 <p>(C) ನಿಮ್ಮ ಸೇವೆಯ ಬಳಕೆಯ ಫಲಿತಾಂಶವೆಂಬಂತೆ ನೀವು ಪಡೆದ ಯಾವುದೇ ಮಾಹಿತಿಯು ನಿಖರ ಅಥವಾ ವಿಶ್ವಾಸಾರ್ಹವಾಗಿರುತ್ತದೆ, ಹಾಗೂ</p>
98 <p>(D) ನಿಮಗೆ ಒದಗಿಸಿದ ಯಾವುದೇ ಸಾಫ್ಟ್‌ವೇರ್‌ನ ಕಾರ್ಯಾಚರಣೆಯಲ್ಲಿ ಅಥವಾ ಕ್ರಿಯಾತ್ಮಕತೆಯಲ್ಲಿ ಕೊರತೆ ಕಂಡುಬಂದರೆ ಸೇವೆಗಳ ಅಂಗವೆಂಬಂತೆ ಅದನ್ನು ಸರಿಪಡಿಸಲಾಗುವುದು.</p>
99 <p>13.4 ಸೇವೆಗಳನ್ನು ಬಳಸಿ ಯಾವುದೇ ವಿಷಯವನ್ನು ಡೌನ್‌ಲೋಡ್ ಮಾಡಿದ್ದರೆ ಅಥವಾ ಪಡೆದಿದ್ದರೆ ಅದನ್ನು ನೀವು ನಿಮ್ಮ ವಿವೇಚನೆ ಮತ್ತು ಜವಾಬ್ದಾರಿಯಿಂದ ಮಾಡಿದ್ದೀರಿ, ಮತ್ತು ಅಂತಹ ವಿಷಯಗಳನ್ನು ಡೌನ್‌ಲೋಡ್ ಮಾಡಿದ ಪರಿಣಾಮವಾಗಿ ನಿಮ್ಮ ಯಾವುದೇ ಕಂಪ್ಯೂಟರ್ ಸಿಸ್ಟಮ್ ಅಥವಾ ಇತರ ಸಾಧನಗಳಿಗೆ ಯಾವುದೇ ಹಾನಿ ಅಥವಾ ಡೇಟಾದ ನಷ್ಟ ಸಂಭವಿಸಿದರೆ ಅದಕ್ಕೆ ನೀವೇ ಜವಾಬ್ದಾರರು.</p>
100 <p>13.5 GOOGLE ನಿಂದ ಅಥವಾ ಆ ಮೂಲಕ ಅಥವಾ ಸೇವೆಗಳಿಂದ ಯಾವುದೇ ಸಲಹೆ ಅಥವಾ ಮಾಹಿತಿ, ಮೌಖಿಕ ಅಥವಾ ಲಿಖಿತವಾಗಿ ನೀವು ಪಡೆದಿದ್ದರೆ ಅವುಗಳು ನಿಯಮಗಳಲ್ಲಿ ವ್ಯಕ್ತವಾಗಿ ಹೇಳಿರದ ಯಾವುದೇ ವಾರಂಟಿಯನ್ನು ಸೃಷ್ಟಿಸಲಾರದು.</p>
101 <p>13.6 ವ್ಯಕ್ತ ಅಥವಾ ಅವ್ಯಕ್ತವಾದವುಗಳನ್ನು ಒಳಗೊಂಡಂತೆ, ಅನ್ವಯವಾಗುವ ವಾರೆಂಟಿಗಳಿಗೆ ಮತ್ತು ಮರ್ಚೆಂಟೆಬಿಲಿಟಿ, ಒಂದು ನಿರ್ದಿಷ್ಟವಾದ ಉದ್ದೇಶಕ್ಕಾಗಿ ಹೊಂದಿಕೊಳ್ಳುವಿಕೆ ಮತ್ತು ಉಲ್ಲಂಘನೆಯಾಗದಿರುವುದಕ್ಕೆ ನಿಯಮಿತವಾಗಿ ಮತ್ತು ಅಷ್ಟೇ ಅಲ್ಲದೆ ಯಾವುದೇ ರೀತಿಯ ಎಲ್ಲ ವಾರೆಂಟಿಗಳು ಮತ್ತು ಹಕ್ಕುಗಳನ್ನು GOOGLE ಇನ್ನಷ್ಟು ವ್ಯಕ್ತವಾಗಿ ನಿರಾಕರಿಸುತ್ತದೆ.</p>
102 <p><strong>14. ಬಾಧ್ಯತೆಯ ಮಿತಿಗಳು</strong></p>
103 <p>14.1 ಮೇಲಿರುವ ಪ್ಯಾರಾಗ್ರಾಫ್13.1 ರಲ್ಲಿರುವ ಎಲ್ಲಾ ಕರಾರಿನ ವಿಷಯವಸ್ತುಗಳಿಗೆ ಸಂಬಂಧಿಸಿದಂತೆ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು ಹಾಗೂ ಅದರ ಪರವಾನಗಿದಾರರು ನಿಮಗೆ ಬಾಧ್ಯತೆ ಹೊಂದಿರುವುದಿಲ್ಲ ಎಂದು ನೀವು ವ್ಯಕ್ತವಾಗಿ ತಿಳಿದಿದ್ದೀರಿ ಮತ್ತು ಒಪ್ಪುತ್ತೀರಿ. ಯಾವುದಕ್ಕೆಂದರೆ:</p>
104 <p>(A) ನೀವು ಯಾವುದೇ ಪ್ರತ್ಯಕ್ಷ, ಪರೋಕ್ಷ, ಪ್ರಾಸಂಗಿಕ, ವಿಶೇಷವಾಗಿ ಮುಖ್ಯವಾದ ಅಥವಾ ಮಾದರಿಯಂತೆ ಹಾನಿಗೀಡಾಗಿದ್ದರೆ, ಯಾವುದೇ ಬಾಧ್ಯತೆಗಳ ಮೇಲೆ ಹಾನಿ ಸಂಭವಿಸಿದ್ದರೆ, ಇದು ಒಳಪಡಬಹುದು.. ಯಾವುದೇ ಲಾಭಾಂಶದ ನಷ್ಟ (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಾನಿಗೀಡಾಗಿದ್ದರೆ), ಯಾವುದೇ ವ್ಯಾಪಾರದ ವಿಶ್ವಾಸದ ಅಥವಾ ವ್ಯವಹಾರದ ಪ್ರಖ್ಯಾತಿಗೆ ಹಾನಿ, ಯಾವುದೇ ಡೇಟಾದ ನಷ್ಟವನ್ನು ಅನುಭವಿಸಿದ್ದರೆ, ಬದಲೀ ಸರಕುಗಳ ಅಥವಾ ಸೇವೆಗಳ ಪ್ರಾಪ್ತಿಯ ದರ, ಅಥವಾ ಇತರ ಅವ್ಯಕ್ತವಾದ ನಷ್ಟ ಈ ಎಲ್ಲವನ್ನು, ಆದರೆ ಅಷ್ಟಕ್ಕೇ ನಿಯಮಿತವಿಲ್ಲದೆ, ಇದು ಒಳಗೊಂಡಿರುತ್ತದೆ;</p>
105 <p>(B) ಈ ಕೆಳಗಿನ ರೀತಿಯ ಫಲಿತಾಂಶಗಳಿಂದಾಗಿ ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದ್ದರೆ, ಮತ್ತು ಅಷ್ಟಕ್ಕೆ ನಿಯಮಿತವಿಲ್ಲದೆ ನಷ್ಟ ಅಥವಾ ಹಾನಿ:</p>
106 <p>(I) ಸೇವೆಯಲ್ಲಿ ಗೋಚರಿಸುವ ಯಾವುದೇ ಜಾಹೀರಾತಿನ ಪೂರ್ಣತೆ, ನಿಖರತೆ ಅಥವಾ ಅಸ್ತಿತ್ವದ ಕುರಿತ ನಿಮ್ಮ ವಿಶ್ವಾಸದ ಪರಿಣಾಮವಾಗಿ, ಅಥವಾ ಸೇವೆಗಳಲ್ಲಿ ಗೋಚರಿಸುವಂತಹ ಯಾವುದೇ ನಿಮ್ಮ ಹಾಗೂ ಜಾಹೀರಾತುದಾರರ ಅಥವಾ ಪ್ರಾಯೋಜಕರ ನಡುವಿನ ಯಾವುದೇ ವಹಿವಾಟು ಅಥವಾ ಸಂಬಂಧದ ಪರಿಣಾಮವಾಗಿ;</p>
107 <p>(II) ಸೇವೆಯಲ್ಲಿ GOOGLE ಮಾಡಬಹುದಾದ ಯಾವುದೇ ಬದಲಾವಣೆಗಳು, ಅಥವಾ ಸೇವೆಗಳ ಸೌಲಭ್ಯದ ಯಾವುದೇ ಶಾಶ್ವತ ಅಥವಾ ತಾತ್ಕಾಲಿಕ ನಿಲುಗಡೆಯಿಂದಾಗಿ (ಅಥವಾ ಸೇವೆಯಲ್ಲಿರುವ ಯಾವುದೇ ವೈಶಿಷ್ಟ್ಯಗಳು);</p>
108 <p>(III) ಸೇವೆಯ ಬಳಕೆಯಿಂದಾಗಿ, ಡೇಟಾ ನಿರ್ವಹಿಸುವ ಅಥವಾ ಇತರ ಸಂವಹನಗಳಿಂದಾಗಿ ಯಾವುದೇ ವಿಷಯದ ಅಳಿಸುವಿಕೆ, ಹಾಳಾಗುವಿಕೆ, ಅಥವಾ ಸಂಗ್ರಹ ವೈಫಲ್ಯತೆ;</p>
109 <p>(IV) GOOGLE ಗೆ ಖಾತೆಯ ನಿಖರವಾದ ಮಾಹಿತಿಯನ್ನು ಒದಗಿಸುವಲ್ಲಿ ನಿಮ್ಮ ವೈಫಲ್ಯ;</p>
110 <p>(V) ನಿಮ್ಮ ಪಾಸ್‌ವರ್ಡ್ ಅಥವಾ ಖಾತೆಯ ವಿವರಗಳನ್ನು ಸುರಕ್ಷಿತ ಮತ್ತು ಗೌಪ್ಯವಾಗಿ ಕಾಪಾಡಿಕೊಳ್ಳಲು ನೀವು ವಿಫಲರಾದರೆ;</p>
111 <p>14.2 ಮೇಲಿರುವ ಪ್ಯಾರಾಗ್ರಾಫ್ 14.1 ರಲ್ಲಿರುವ GOOGLEನ ಬಾಧ್ಯತೆಯ ಮಿತಿಗಳು, GOOGLE ಗೆ ಸಲಹೆಮಾಡಿದ್ದರೂ ಅಥವಾ ಇಲ್ಲದಿದ್ದರೂ, ಅಥವಾ ಅಂತಹ ನಷ್ಟಗಳು ಆಗಬಹುದಾದ ಸಾಧ್ಯತೆಯ ಕುರಿತು ಎಚ್ಚರ ವಹಿಸಬಹುದಾಗಿತ್ತಾದರೂ ಅನ್ವಯಿಸುತ್ತದೆ.</p>
112 <p><strong>15. ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ನೀತಿಗಳು</strong></p>
113 <p>15.1 ಅನ್ವಯಿತ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ನಿಯಮದಂತೆ (ಯುನೈಟೆಡ್ ಸ್ಟೇಟ್ಸ್, ಡಿಜಿಟಲ್ ಮಿಲ್ಲೇನಿಯಂ ಕೃತಿಸ್ವಾಮ್ಯ ಕಾಯ್ದೆ ಒಳಗೊಂಡಂತೆ) ಕೃತಿಸ್ವಾಮ್ಯ ಉಲ್ಲಂಘನೆಯ ಆಪಾದನೆಯ ಪ್ರಕಟಣೆಗಳಿಗೆ ಪ್ರತಿಕ್ರಿಯೆ ನೀಡುವ ಮತ್ತು ಪುನರಾವರ್ತಿತ ಉಲ್ಲಂಘನೆಗಳ ಖಾತೆಗಳನ್ನು ನಿರ್ನಾಮ ಮಾಡುವುದು Google ನ ನೀತಿಯಾಗಿದೆ. Googleನ ನೀತಿಯ ವಿವರಗಳು http://www.google.com/dmca.html ನಲ್ಲಿ ದೊರೆಯುವುವು.</p>
114 <p>15.2 Google ನವರ ಜಾಹೀರಾತು ವ್ಯವಹಾರದಲ್ಲಿನ ವ್ಯಾಪಾರ ಮುದ್ರೆಯ ದೂರುಗಳ ಪ್ರಕ್ರಿಯೆ ಕಾರ್ಯನಿರ್ವಹಣೆಯನ್ನು Google ಮಾಡುತ್ತದೆ, ಇವುಗಳ ವಿವರಗಳು http://www.google.com/tm_complaint.html ನಲ್ಲಿ ದೊರೆಯುವುವು.</p>
115 <p><strong>16. ಜಾಹೀರಾತುಗಳು</strong></p>
116 <p>16.1 ಕೆಲವು ಸೇವೆಗಳನ್ನು ಜಾಹೀರಾತು ವರಮಾನ ಬೆಂಬಲದಿಂದ ನಡೆಸಲಾಗುತ್ತದೆ ಮತ್ತು ಜಾಹೀರಾತುಗಳು ಹಾಗೂ ಪ್ರಾಯೋಜಕತ್ವವನ್ನು ಪ್ರದರ್ಶಿಸುತ್ತದೆ . ಈ ಜಾಹೀರಾತುಗಳು ಸೇವೆಗಳಲ್ಲಿ ಸಂಗ್ರಹಿಸಿದ ಮಾಹಿತಿಯ ವಿಷಯವನ್ನು, ಸೇವೆಗಳ ಅಥವಾ ಇತರ ಮಾಹಿತಿಗಳ ಮೂಲಕ ಮಾಡಲಾದ ಪ್ರಶ್ನೆಗಳನ್ನು ಗುರಿಯಾಗಿಟ್ಟುಕೊಂಡಿರಬಹುದು.</p>
117 <p>16.2 ಸೇವೆಗಳಲ್ಲಿನ Google ನ ಜಾಹೀರಾತಿನ ವಿಧಾನ, ಮೋಡ್ ಮತ್ತು ಜಾಹೀರಾತಿನ ಹರವುಗಳು ನಿಮಗೆ ನಿರ್ದಿಷ್ಟ ಪ್ರಕಟಣೆಯನ್ನು ನೀಡದೆಯೇ ಬದಲಾಗಬಹುದು.</p>
118 <p>16.3 ನಿಮ್ಮ ಅಪೇಕ್ಷೆಯಂತೆ Google ಸೇವೆಗಳ ಪ್ರವೇಶ ಮತ್ತು ಬಳಕೆಯನ್ನು ಪೂರೈಸುವುದರಿಂದ, Google ನಂತಹ ಜಾಹೀರಾತುಗಳನ್ನು ಸೇವೆಗಳಲ್ಲಿರಿಸುವುದನ್ನು ನೀವು ಒಪ್ಪಿಕೊಳ್ಳುತ್ತೀರಿ.</p>
119 <p><strong>17. ಇತರ ವಿಷಯ</strong></p>
120 <p>17.1 ಸೇವೆಗಳು ಇತರ ವೆಬ್‌ಸೈಟ್‌ಗಳಿಗೆ ಅಥವಾ ವಿಷಯ ಅಥವಾ ಸಂಪನ್ಮೂಲಗಳಿಗೆ ಹೈಪರ್‌ಲಿಂಕ್‌‍ಗಳನ್ನು ಒಳಗೊಂಡಿರಬಹುದು. Google ನ ಹೊರತಾದ ವ್ಯಕ್ತಿ ಅಥವಾ ಕಂಪನಿಯವರು ಒದಗಿಸಿರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳ ಮೇಲೆ Google ಗೆ ನಿಯಂತ್ರಣವಿರುವುದಿಲ್ಲ.</p>
121 <p>17.2 ಅಂತಹ ಯಾವುದೇ ಬಾಹ್ಯ ಸೈಟ್‌ಗಳಿಗೆ ಅಥವಾ ಸಂಪನ್ಮೂಲಗಳ ಲಭ್ಯತೆಗೆ ಹಾಗೂ ಯಾವುದೇ ಜಾಹೀರಾತುಗಳಿಗೆ Google ಜವಾಬ್ದಾರವಲ್ಲ, ಹಾಗೂ ಅಂತಹ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳಿಂದಿರುವ ಅಥವಾ ಲಭ್ಯವಾಗುವ ಉತ್ಪನ್ನಗಳು ಅಥವಾ ಇತರ ವಸ್ತುಗಳನ್ನು Google ಸಮರ್ಥಿಸುವುದಿಲ್ಲ ಎಂಬುವುದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
122 <p>17.3 ಅಂತಹ ಬಾಹ್ಯ ಸೈಟ್‌ಗಳ ಅಥವಾ ಸಂಪನ್ಮೂಲಗಳ ಲಭ್ಯತೆಯ ಪರಿಣಾಮವಾಗಿ ಅಥವಾ ಅವುಗಳ ಪೂರ್ಣತೆ, ನಿಖರತೆ ಮತ್ತು ಜಾಹೀರಾತಿನ, ಉತ್ಪನ್ನಗಳ ಅಥವಾ ಇತರೆ ವಸ್ತುಗಳ ಅಸ್ತಿತ್ವದ ಕುರಿತಂತೆ ನೀವಿರಿಸಿದ ಭರವಸೆಯಿಂದಾಗಿ ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ Google ಇವುಗಳಿಗೆ ಹೊಣೆಗಾರಿಕೆ ಹೊಂದಿಲ್ಲ ಎಂಬದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.</p>
123 <p><strong>18. ನಿಯಮಗಳಿಗೆ ಬದಲಾವಣೆಗಳು</strong></p>
124 <p>18.1 Google ಕಾಲಕಾಲಕ್ಕೆ ತಕ್ಕಂತೆ ಸಾರ್ವತ್ರಿಕ ನಿಯಮಗಳು ಮತ್ತು ಹೆಚ್ಚುವರಿ ನಿಯಮಗಳನ್ನು ಬದಲಾವಣೆಗಳನ್ನು ಮಾಡಬಹುದು. ಈ ಬದಲಾವಣೆಗಳನ್ನು ಮಾಡಿದಾಗ, Google http://www.google.com/chrome/intl/en/eula_text.html ನಲ್ಲಿ ಲಭ್ಯವಿರುವ ಸಾರ್ವತ್ರಿಕ ನಿಯಮಗಳ ಹೊಸ ಪ್ರತಿಯನ್ನು ಮಾಡುತ್ತದೆ ಮತ್ತು ಅದರ ಒಳಗೆ ಅಥವಾ ಪರಿಣಾಮಗೊಂಡ ಸೇವೆಗಳ ಮೂಲಕ ನಿಮಗೆ ಯಾವುದೇ ಹೊಸ ಹೆಚ್ಚುವರಿ ನಿಯಮಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.</p>
125 <p>18.2 ಸಾರ್ವತ್ರಿಕ ನಿಯಮ ಹಾಗೂ ಹೆಚ್ಚುವರಿ ನಿಯಮಗಳನ್ನು ಬದಲಿಸಿದ ನಂತರದ ದಿನದಲ್ಲಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, Google ನಿಮ್ಮ ಬಳಕೆಯನ್ನು ನವೀಕರಿಸಿದ ಸಾರ್ವತ್ರಿಕ ನಿಯಮಗಳು ಅಥವಾ ಹೆಚ್ಚುವರಿ ನಿಯಮಗಳ ಸಮ್ಮತಿಯೆಂಬಂತೆ ಪರಿಗಣಿಸುವುದು.</p>
126 <p><strong>19. ಸಾಮಾನ್ಯ ಕಾನೂನು ನಿಯಮಗಳು</strong></p>
127 <p>19.1 ಸೇವೆಗಳನ್ನು ಬಳಸುವ ಸಂದರ್ಭದಲ್ಲಿ , ನೀವು (ಸೇವೆಗಳನ್ನು ಬಳಸುವುದರ ಅಥವಾ ಅದರ ಪರಿಣಾಮವಾಗಿ) ಸೇವೆಯೊಂದನ್ನು ಬಳಸಬಹುದು ಅಥವಾ ಸಾಫ್ಟ್‌ವೇರ್‌ನ ಭಾಗವೊಂದನ್ನು ಡೌನ್‌ಲೋಡ್ ಮಾಡಬಹುದು ಅಥವಾ ಸೇವೆಯನ್ನು, ಅಥವಾ ಇತರ ವ್ಯಕ್ತಿ ಅಥವಾ ಕಂಪನಿಯಿಂದ ಒದಗಿಸಲ್ಪಟ್ಟಂತಹ ಸರಕುಗಳನ್ನು ಖರೀದಿಸಬಹುದು. ಇಂತಹ ಇತರ ಸೇವೆಗಳ, ಸಾಫ್ಟ್‌ವೇರ್ ಅಥವಾ ಸರಕುಗಳ ನಿಮ್ಮ ಬಳಕೆ, ನಿಮ್ಮ ಮತ್ತು ಕಂಪನಿ ಅಥವಾ ಆ ವ್ಯಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಕ್ಕೆ ಒಳಪಡುತ್ತದೆ. ಹಾಗಿದ್ದಲ್ಲಿ, ಇತರ ಕಂಪನಿಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗಿನ ನಿಮ್ಮ ಕಾನೂನು ಸಂಬಂಧದ ಮೇಲೆ ಈ ನಿಯಮಗಳು ಪರಿಣಾಮ ಬೀರುವುದಿಲ್ಲ.</p>
128 <p>19.2 ಈ ನಿಯಮಗಳು ನಿಮ್ಮ ಮತ್ತು Google ನಡುವೆ ಸಂಪೂರ್ಣ ಕಾನೂನು ಒಪ್ಪಂದವನ್ನು ಹೊಂದಿರುತ್ತದೆ ಮತ್ತು ನಿಮ್ಮ ಸೇವೆಗಳ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ (ಆದರೆ, ಪ್ರತ್ಯೇಕ ಲಿಖಿತ ಒಪ್ಪಂದದಡಿಯಲ್ಲಿ Google ನಿಮಗೆ ಒದಗಿಸಬಹುದಾದ ಸೇವೆಗಳನ್ನು ಹೊರಪಡಿಸಿ), ಹಾಗೂ ಸೇವೆಗಳ ಸಂಬಂಧಿತ ಯಾವುದೇ ಪೂರ್ವ ಒಪ್ಪಂದವು ನಿಮ್ಮ ಮತ್ತು Google ನಡುವೆ ಇದ್ದರೆ ಅದನ್ನು ಸಂಪೂರ್ಣವಾಗಿ ಬದಲಿಸುತ್ತದೆ.</p>
129 <p>19.3 Google ನಿಮಗೆ, ನಿಯಮಗಳ ಬದಲಾವಣೆಯ ಬಗ್ಗೆ ಪ್ರಕಟಣೆಗಳನ್ನು ಇಮೇಲ್ ಮೂಲಕ, ಸಾಮಾನ್ಯ ಮೇಲ್ ಅಥವಾ ಸೇವೆಗಳಲ್ಲಿನ ಪೋಸ್ಟಿಂಗ್ ಮೂಲಕ ಒದಗಿಸಬಹುದೆಂದು ನೀವು ಒಪ್ಪುತ್ತೀರಿ.</p>
130 <p>19.4 ಕೆಲವೊಮ್ಮೆ Google ನಿಯಮದಲ್ಲಿರುವ ಯಾವುದೇ ಕಾನೂನು ಹಕ್ಕು ಅಥವಾ ಪರಿಹಾರವನ್ನು ಆಚರಣೆಗೆ ತರದಿದ್ದರೆ ಅಥವಾ ಅಧಿಕಾರ ಚಲಾಯಿಸದಿದ್ದರೆ (ಅಥವಾ ಯಾವುದೇ ಅನ್ವಯಿತ ಕಾನೂನಿನಡಿ Google ಗೆ ಪ್ರಯೋಜನವಿದ್ದರೆ), ಇದನ್ನು Google ನವರ ಹಕ್ಕಿನ ಔಪಚಾರಿಕ ವಿನಾಯಿತಿಯೆಂದು ತೆಗೆದುಕೊಳ್ಳಲಾಗುವುದಿಲ್ಲ ಹಾಗೂ ಆ ಹಕ್ಕುಗಳು ಅಥವಾ ಪರಿಹಾರಗಳು Google ಗೆ ಈಗಲೂ ಲಭ್ಯವಿದೆ ಎಂದು ನೀವು ಒಪ್ಪುತ್ತೀರಿ.</p>
131 <p>19.5 ಈ ವಿಷಯದ ವಿಚಾರಣಾ ಅಧಿಕಾರ ವ್ಯಾಪ್ತಿಯ ಯಾವುದೇ ನ್ಯಾಯಾಲಯವು, ಯಾವುದೇ ನಿಯಮಗಳ ಸೌಲಭ್ಯವನ್ನು ಅಸಿಂಧುವೆಂದು ಘೋಷಿಸಿದ್ದಲ್ಲಿ, ಆ ಸೌಲಭ್ಯವನ್ನು ನಿಯಮಗಳ ಪಟ್ಟಿಯಿಂದ, ಉಳಿದವುಗಳಿಗೆ ಹಾನಿಯಾಗದಂತೆ ತೆಗೆದುಹಾಕಲಾಗುವುದು. ಬಾಕಿ ಉಳಿದ ನಿಯಮಗಳ ಸೌಲಭ್ಯಗಳು ಮಾನ್ಯವಾಗಿದ್ದು ಮಾನ್ಯವಾಗಿ ಮುಂದುವರಿಯುತ್ತದೆ.</p>
132 <p>19.6 Google ನ ಒಡೆತನದಲ್ಲಿರುವ ಕಂಪನಿಗಳ ಸಮೂಹದಲ್ಲಿರುವ ಪ್ರತಿಯೊಬ್ಬ ಸದಸ್ಯನು ನಿಯಮಗಳ ಮೂರನೇ ವ್ಯಕ್ತಿಯ ಫಲಾನುಭವಿಯಾಗಿರುತ್ತಾರೆ ಮತ್ತು ಅಂತಹ ಇತರ ಕಂಪನಿಗಳನ್ನು ನೇರವಾಗಿ ಅಧಿಕಾರ ಚಲಾಯಿಸಲು ಮತ್ತು ಅವಲಂಬಿಸಲು, ನಿಯಮಗಳ ಯಾವುದೇ ಕರಾರುಗಳು ಅವರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ. ಇದಲ್ಲದಿದ್ದರೆ, ಯಾವುದೇ ವ್ಯಕ್ತಿ ಅಥವಾ ಕಂಪನಿಯು ನಿಯಮಗಳ ತೃತೀಯ ಪಕ್ಷದ ಫಲಾನುಭವಿಯಾಗಲು ಸಾಧ್ಯವಿಲ್ಲ.</p>
133 <p>19.7 ನಿಯಮಗಳು, ಹಾಗೂ ನಿಯಮಗಳಡಿಯಲ್ಲಿರುವ ನಿಮ್ಮ ಮತ್ತು Google ನ ಸಂಬಂಧಗಳು, ಅದರ ಯಾವುದೇ ನಿಯಮಗಳ ಕರಾರಿನ ಸಂಘರ್ಷಗಳ ಪರಿಗಣನೆಯಿಲ್ಲದೆ ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾದ ಕಾನೂನು ಪ್ರಕಾರ ಚಲಾಯಿಸಲ್ಪಡುವುದು. ನಿಯಮಗಳಿಂದ ಉದ್ಭವಿಸಬಹುದಾದ ಯಾವುದೇ ಕಾನೂನು ವಿಷಯಗಳನ್ನು ನೀವು ಮತ್ತು Google ಸ್ಯಾಂಟ್ ಕ್ಲಾರಾ ಕ್ಯಾಲಿಫೋರ್ನಿಯಾದ ಒಳಗೆ ನೆಲೆಸಿರುವ ನ್ಯಾಯಾಲಯ ವ್ಯಾಪ್ತಿಯನ್ನು ಸಲ್ಲಿಸಲು ಒಪ್ಪಿರುತ್ತೀರಿ. ಹಾಗಿದ್ದರೂ, ಯಾವುದೇ ನ್ಯಾಯಾಲಯ ವ್ಯಾಪ್ತಿಯಲ್ಲಿ ಪ್ರತಿಬಂಧಕ ಉಪಾಯಗಳಿಗೆ (ಅಥವಾ ಸಮಾನ ರೀತಿಯ ತುರ್ತು ಕಾನೂನುಬದ್ಧ ಪರಿಹಾರ) Google ಗೆ ಅನುಮತಿಸಲು ನೀವು ಒಪ್ಪುತ್ತೀರಿ.</p>
134 <p><strong>20. Google Chrome ನ ವಿಸ್ತರಣೆಗಳಿಗಾಗಿ ಹೆಚ್ಚುವರಿ ನಿಯಮಗಳು</strong></p>
135 <p>20.1 Google Chrome ನ ನಿಮ್ಮ ನಕಲಿನಲ್ಲಿ ನೀವು ವಿಸ್ತರಣೆಗಳನ್ನು ಸ್ಥಾಪಿಸಿದರೆ ಈ ವಿಭಾಗದಲ್ಲಿನ ಈ ನಿಯಮಗಳು ಅನ್ವಯವಾಗುತ್ತದೆ. Google ಅಥವಾ ಮೂರನೇ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ವಿಸ್ತರಣೆಗಳು ಚಿಕ್ಕ ಸಾಫ್ಟ್‌ವೇರ್ ಪ್ರೋಗ್ರಾಂಗಳಾಗಿವೆ, ಇದು Google Chrome ನ ಕಾರ್ಯಕ್ಷಮತೆಯನ್ನು ಮಾರ್ಪಡಿಸುತ್ತದೆ ಮತ್ತು ವರ್ಧಿಸುತ್ತದೆ. ನಿಮ್ಮ ಖಾಸಗಿ ಡೇಟಾವನ್ನು ಓದಲು ಮತ್ತು ಮಾರ್ಪಡಿಸುವ ಸಾಧ್ಯತೆಯನ್ನು ಒಳಗೊಂಡಂತೆ, ವಿಸ್ತರಣೆಗಳು ಸಾಮಾನ್ಯ ವೆಬ್‌ಪುಟಗಳಿಗಿಂತಲೂ ನಿಮ್ಮ ಬ್ರೌಸರ್ ಅಥವಾ ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸಲು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತವೆ.</p>
136 <p>20.2 ಕಾಲ ಕಾಲಕ್ಕೆ, Google Chrome ರಿಮೋಟ್ ಸರ್ವರ್‌ಗಳೊಂದಿಗೆ (Google ಅಥವಾ ಮೂರನೇ ವ್ಯಕ್ತಿಗಳಿಂದ ಹೋಸ್ಟ್‌ ಮಾಡಲಾಗಿರುವ ) ಉತ್ಪನ್ನಗಳಿಗೆ ಲಭ್ಯವಿರುವ ನವೀಕರಣಗಳನ್ನು ಒಳಗೊಂಡಂತೆ ಮತ್ತು ಬಗ್ ಫಿಕ್ಸಿಂಗ್ ಅಥವಾ ಅಭಿವೃದ್ಧಿಪಡಿಸಿದ ಕಾರ್ಯಾಚರಣೆಗೆ ನಿಯಮಿತವಾಗಿಲ್ಲದಂತೆ ಪರಿಶೀಲಿಸಬಹುದು. ಆ ರೀತಿಯ ನವೀಕರಣಗಳನ್ನು ಸ್ವಯಂಚಾಲಿತವಾಗಿ ವಿನಂತಿಸಲಾಗುವುದು, ಡೌನ್‌ಲೋಡ್ ಮಾಡಲಾಗುವುದು, ಮತ್ತು ನಿಮಗೆ ಯಾವುದೇ ಹೆಚ್ಚಿನ ಸೂಚನೆ ಇಲ್ಲದೆ ಸ್ಥಾಪಿಸಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ.</p>
137 <p>20.3 ಕಾಲ ಕಾಲಕ್ಕೆ, ಒಂದು ಉತ್ಪನ್ನವು Google ಡೆವಲಪರ್ ನಿಯಮಗಳು ಅಥವಾ ಇತರ ಕಾನೂನುಬದ್ಧ ಒಪ್ಪಂದಗಳು, ನೀತಿಗಳು, ನಿಯಮಗಳು ಅಥವಾ ನೀತಿಗಳನ್ನು ವಿಸ್ತರಣೆಗಳು ಉಲ್ಲಂಘಿಸುತ್ತದೆಯೆ ಎಂದು Google ಕಂಡುಹಿಡಿಯಬಹುದು. Google ನ ಸರ್ವರ್‌ಗಳಿಂದ ಆ ರೀತಿಯ ವಿಸ್ತರಣೆಗಳ ಪಟ್ಟಿಯನ್ನು ಕಾಲ ಕಾಲಕ್ಕೆ Google Chrome ಡೌನ್‌ಲೋಡ್ ಮಾಡುತ್ತದೆ. ಆ ರೀತಿಯ ವಿಸ್ತರಣೆಯನ್ನು ಬಳಕೆದಾರ ಸಿಸ್ಟಂನಿಂದ ತನ್ನ ಸ್ವಂತ ತೀರ್ಮಾನದಂತೆ Google ದೂರದಿಂದಲೆ ನಿಷ್ಕ್ರಿಯಗೊಳಿಸಬಹುದು ಅಥವಾ ತೆಗೆದುಹಾಕಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ. </p>
138 <br>
139 <h2>ಅನುಬಂಧ A</h2>
140 <p>Adobe Systems Incorporated ಮತ್ತು Adobe Software Ireland Limited (ಒಟ್ಟು ಮೊತ್ತವಾಗಿ “Adobe”) ನಿಂದ ಒದಗಿಸಲಾದ Google Chrome ಒಂದು ಅಥವಾ ಹೆಚ್ಚಿನ ಅಂಶಗಳನ್ನು ಹೊಂದಿರಬಹುದು. Google ನಿಂದ (“Adobe Software”) ಒದಗಿಸಲಾದ Adobe ಸಾಫ್ಟ್‌ವೇರ್‌ನ ನಿಮ್ಮ ಬಳಕೆಯು ಈ ಮುಂದಿನ ಹೆಚ್ಚುವರಿ ನಿಯಮಗಳಿಗೆ (“Adobe Terms”) ಸಂಬಂಧಿಸಿದೆ. ನೀವು, Adobe Software ಸ್ವೀಕರಿಸುವಲ್ಲಿ ಅಸ್ತಿತ್ವ ಹೊಂದಿದ್ದಲ್ಲಿ, “ಉಪಪರವಾನಗಿದಾರ”ರಂತೆ ಮುಂದಿನ ಭಾಗದಲ್ಲಿ ಉಲ್ಲೇಖಿಸಲಾಗಿದೆ.</p>
141 <p>1. ಪರವಾನಗಿ ಪರಿಮಿತಿಗಳು.</p>
142 <p>(a) ಫ್ಲ್ಯಾಷ್ ಪ್ಲೇಯರ್, ಬ್ರೌಸರ್ ಪ್ಲಗ್ - ಇನ್ ನಂತೆ ಆವೃತ್ತಿ 10.x ಅನ್ನು ವಿನ್ಯಾಸಗೊಳಿಸಲಾಗಿದೆ. ಬ್ರೌಸರ್ ಪ್ಲಗ್- ಇನ್ ವೆಬ್ ಪುಟದಲ್ಲಿ ಹಿಂಬದಿಯ ಕಂಟೆಂಟ್ ಪ್ಲೇ ಮಾಡುವುದಕ್ಕಾಗಿ ಹೊರತುಪಡಿಸಿ ಉಪಪರವಾನಗಿದಾರ ಈ Adobe ಸಾಫ್ಟ್‌ವೇರ್ ಅನ್ನು ನವೀಕರಿಸಿಲ್ಲ ಅಥವಾ ವಿತರಿಸಿಲ್ಲ. ಉದಾಹರಣೆಗೆ, ಅಪ್ಲಿಕೇಶನ್‌ನೊಂದಿಗೆ ಇಂಟರ್ ಆಪರೇಷನ್ ಅನುಮತಿಸಲು ಉಪಪರವಾನಗಿದಾರರು ಬ್ರೌಸರ್‌ ಹೊರ ಭಾಗದಲ್ಲಿ ಚಲಿಸುವ ಈ Adobe ಸಾಫ್ಟ್‌ವೇರ್‌ನನ್ನು ನವೀಕರಿಸುವುದಿಲ್ಲ (ಉದಾ., ಸ್ಟ್ಯಾಂಡಲ್‍ವನ್ ಅಪ್ಲಿಕೇಶನ್‌ಗಳು, ವಿಡ್‌ಗೆಟ್‌ಗಳು, ಸಾಧನ UI).</p>
143 <p>(b)ಉಪಪರವಾನಗಿದಾರರು ಯಾವುದೇ ಫ್ಲಾಶ್ ಪ್ಲೇಯರ್‌ಗಳ APIಗಳನ್ನು ಬಹಿರಂಗಪಡಿಸುವುದಿಲ್ಲ, ಆವೃತ್ತಿ 10.x ಬ್ರೌಸರ್ ಪ್ಲಗ್ -ಇನ್ ಇಂಟರ್‌ಫೇಸ್ ಮೂಲಕ ಕೆಲವು ಮಾರ್ಗದಲ್ಲಿ ಕೆಲವು ವಿಸ್ತರಣೆಗಳನ್ನು ಸ್ಚ್ಯಾಂಡ್- ಅಲೋನ್ ಅಪ್ಲೇಕೇಶನ್ ನಂತಹ ವೆಬ್ ಪುಟದಿಂದ ಪ್ಲೇ ಬ್ಯಾಕ್ ಕಂಟೆಂಟ್‌ಗೆ ಬಳಸಲಾಗುತ್ತದೆ.</p>
144 <p>(c) Chrome ಸಾಫ್ಟ್‌ವೇರ್ ಓದುವವರು PDF ಅಥವಾ EPUB ಡಾಕ್ಯುಮೆಂಟ್ ಗೆ ಪ್ರತಿಯಾಗಿ ಯಾವುದನ್ನು ಬಳಸುವುದಿಲ್ಲ ಅದು ಡಿಜಿಟಲ್ ಹಕ್ಕುಗಳ ಮ್ಯಾನೇಜ್‌ಮೆಂಟ್ ಪ್ರೊಟೋಕಾಲ್‌ಗಳು ಅಥವಾ Adobe DRM ಇತರೆ ಸಿಸ್ಟಂ‌ಗಳಿಗೆ ಉಪಯೋಗಿಸಲಾಗುತ್ತದೆ.</p>
145 <p>(d) ಎಲ್ಲಾ Adobe DRMನಿಂದ ರಕ್ಷಿಸಲಾದ PDF ಮತ್ತು EPUB ಡಾಕ್ಯುಮೆಂಟ್‌ಗಳಿಗಾಗಿ Chrome - ಓದುಗರ ಸಾಫ್ಟ್‌ವೇರ್‌ನಲ್ಲಿ Adobe DRM ಸಕ್ರಿಯವಾಗಲೇಬೇಕು. </p>
146 <p>(e) Chrome ಓದುಗರ ಸಾಫ್ಟ್‌ವೇರ್‌, ತಾಂತ್ರಿಕ ನಿರ್ಧಾರಗಳ ಸ್ಪಷ್ಟ ಅನುಮೋದನೆ ಜೊತೆಗೆ, Adobe ಸಾಫ್ಟ್‌ವೇರ್‌ನಲ್ಲಿ Adobe ಒದಗಿಸಿರುವ ಯಾವುದೇ ಸಾಮರ್ಥ್ಯಗಳನ್ನು ನಿಷ್ಕ್ರಿಯಗೊಳಿಸುವುದಿಲ್ಲ. PDF ಮತ್ತು EPUB ಫಾರ್ಮೆಟ್‌ಗಳು ಮತ್ತು Adobe DRM ಗಳನ್ನು ಒಳಗೊಂಡರೂ ಅದೇ ಅದಕ್ಕೆ ಮಿತಿಯಲ್ಲ. </p>
147 <p>2. ಎಲೆಕ್ಟ್ರಾನಿಕ್‌ ಪ್ರಸರಣ ವೆಬ್‌ಸೈಟ್‌ನಿಂದ Adobe ಸಾಫ್ಟ್‌ವೇರ್‌ನನ್ನು ಡೌನ್‌ಲೋಡ್ ಮಾಡಲು ಉಪಪರವಾನಗಿದಾರರು ಅನುಮತಿಸುತ್ತಾರೆ, ಇಂಟರ್‌ನೆಟ್, ಇಂಟ್ರಾನೆಟ್, ಅಥವಾ ಅದೇ ತರಹದ ತಂತ್ರಜ್ಞಾನ (" ಎಲೆಕ್ಟ್ರಾನಿಕ್‌ ಪ್ರಸರಣಗಳು) ಆ ಪರವಾನಗಿದಾರರ ಅನುಮತಿಯನ್ನು ಒದಗಿಸಲಾದ ಯಾವುದೇ ವಿತರಣೆಗಳನ್ನು ಉಪಪರವಾನಗಿದಾರರ ಮೂಲಕ Adobe ಸಾಫ್ಟ್‌ವೇರ್ ಒಳಗೊಂಡಂತೆ CD-ROM, DVD-ROM ಅಥವಾ ಸಂಗ್ರಹಣಾ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಸಂವಹನಗಳನ್ನು ಅನುಮತಿಸಿದಲ್ಲಿ, ಸುರಕ್ಷತೆಯ ಕಾರಣಕ್ಕಾಗಿ ಅನಧಿಕೃತ ಉಪಯೋಗವನ್ನು ತಡೆಯುವ ಯೋಜನೆಯ ಕಾರಣವಾಗಿದೆ. ಈ ಕೆಳಗೆ ಅನುಮೋದಿಸಲ್ಪಟ್ಟ ಎಲೆಕ್ಟ್ರಾನಿಕ್ ಪ್ರಸರಣಗಳಿಗೆ ಸಂಬಂಧಿಸಿದಂತೆ, Adobe ಮೂಲಕ ಯಾವುದೇ ತರ್ಕಬದ್ದವಾದ ಪರಿಮಿತಿಗಳನ್ನು ಬಳಸಲು ಉಪಪರವಾನಗಿದಾರರು ಅನುಮತಿಸಬೇಕಾಗುತ್ತದೆ, ಸುರಕ್ಷತೆಗೆ ಸಂಬಂಧಿಸಿದವುಗಳನ್ನು ಮತ್ತು / ಅಥವಾ ಉಪಪರವಾನಗಿದಾರರ ಉತ್ಪನ್ನಗಳ ಕೊನೆಯ ಬಳಕೆದಾರಲ್ಲಿನ ವಿತರಣಾ ಪರಿಮಿತಿ ಒಳಗೊಂಡಂತೆ.</p>
148 <p>3. EULA ಮತ್ತು ವಿತರಣೆಯ ನಿಯಮಗಳು.</p>
149 <p>(a) Adobe ಸಾಫ್ಟ್‌ವೇರ್ ಅನ್ನು ಅಂತಿಮ ಬಳಕೆದಾರರಿಗೆ ನಿರ್ಬಂಧಪಡಿಸಲಾಗುವ ಅಂತಿಮ ಬಳಕೆದಾರ ಪರವಾನಗಿ ಒಪ್ಪಂದದಡಿ ವಿತರಿಸಲಾಗುತ್ತದೆ ಎಂದು ಉಪಪರವಾನಗಿದಾರನು ಖಚಿತಪಡಿಸುತ್ತಾನೆ ಹಾಗೂ ಉಪಪರವಾನಗಿದಾರನ ಪರವಾಗಿ ಮತ್ತು ಅವರ ಪೂರೈಕೆದಾರರು ಈ ಕೆಳಗಿನ ಕನಿಷ್ಠ ನಿಬಂಧನೆಗಳನ್ನು ಹೊಂದಿರಬೇಕು (“ಅಂತಿಮ-ಬಳಕೆದಾರ ಪರವಾನಗಿ”): (i) ವಿತರಣೆ ಮತ್ತು ನಕಲಿಸುವುದರ ವಿರುದ್ಧ ನಿರ್ಬಂಧ, (ii) ಮಾರ್ಪಾಡುಗಳು ಮತ್ತು ಸಂಯುಕ್ತ ಕಾರ್ಯಗಳ ನಿರ್ಬಂಧನೆ, (iii) ಅಸಂಕಲೀಕರಣ, ಹಿಂತಿರುಗಿದ ಎಂಜಿನಿಯರಿಂಗ್, ಜೋಡಣೆಯನ್ನು ತೆಗೆದುಹಾಕುವುದು, ಮತ್ತು ಅಲ್ಲದೆ Adobe ಸಾಫ್ಟ್‌ವೇರ್ ಅನ್ನು ಮಾನವ ಗ್ರಾಹ್ಯ ಪ್ರಕಾರದ ವಿರುದ್ಧ ನಿರ್ಬಂಧಿಸುವುದು, (iv) ಉಪಪರವಾನಗಿದಾರ ಮತ್ತು ಅದರ ಪರವಾನಗಿದಾರರಿಂದ ಉಪಪರವಾನಗಿ ಉತ್ಪನ್ನದ (ಸೆಕ್ಷನ್ 8 ರಲ್ಲಿ ವಿವರಿಸಿರುವಂತೆ) ಮಾಲೀಕತ್ವವನ್ನು ಸೂಚಿಸುವ ಒಂದು ವ್ಯವಸ್ಥೆ, (v) ಪರೋಕ್ಷ, ವಿಶೇಷ, ಸಾಂದರ್ಭಿಕ, ಶಿಕ್ಷಾರೂಪದ, ಮತ್ತು ಸುಸಂಗತವಾದ ಹಾನಿಗಳ ಹಕ್ಕುನಿಕಾರಣೆ, ಮತ್ತು (vi) ಇತರ ಕೈಗಾರಿಕೆ ಪ್ರಮಾಣಿತ ಹಕ್ಕುನಿಕಾರಣೆಗಳು ಮತ್ತು ನಿಬಂಧನೆಗಳು, ಅನ್ವಯವಾಗುವಂತೆ ಸೇರಿದಂತೆ: ಕಾನೂನು ಅನುಮತಿಸುವವರೆಗೆ ಅನ್ವಯವಾಗುವ ಎಲ್ಲಾ ಕಾನೂನುಸಮ್ಮತ ವಾರೆಂಟಿಗಳ ಹಕ್ಕುನಿರಾಕರಣೆ.</p>
150 <p>(b) Adobe ಸಾಫ್ಟ್‌ವೇರ್ ಅನ್ನು ಉಪಪರವಾನಗಿದಾರನ ವಿತರಕರಿಗೆ ನಿರ್ಬಂಧಪಡಿಸಲಾಗುವ ವಿತರಣೆ ಪರವಾನಗಿ ಒಪ್ಪಂದದಡಿ ವಿತರಿಸಲಾಗಿದೆ ಎಂಬುದನ್ನು ಉಪಪರವಾನಗಿದಾರ ಖಚಿತಪಡಿಸಬೇಕು, ಉಪಪರವಾನಗಿದಾರರ ಪರವಾಗಿ ಮತ್ತು ಅದರ ಪೂರೈಕೆದಾರರು Adobe ನಿಬಂಧನೆಗಳಂತೆ Adobe ರಕ್ಷಿಸುವಂತಹ ನಿಬಂಧನೆಗಳನ್ನು ಹೊಂದಿರಬೇಕು.</p>
151 <p>4. ಓಪನ್‌ಸೋರ್ಸ್. ಉಪಪರವಾನಗಿದಾರನು ನೇರವಾಗಿ ಅಥವಾ ಪರೋಕ್ಷವಾಗಿ, ಅಥವಾ ಅನುಮತಿಸುವ ಇಂಗಿತವನ್ನು ಯಾವುದೇ ಮೂರನೇ ವ್ಯಕ್ತಿಗೆ ಯಾವುದೇ ಹಕ್ಕುಗಳು ಅಥವಾ Adobe ನ ಬೌದ್ಧಿಕ ಆಸ್ತಿ ಅಥವಾ ಮಾಲೀಕತ್ವ ಹಕ್ಕುಗಳ ಅಡಿಯಲ್ಲಿ ಅದು ಆ ರೀತಿಯ ಬೌದ್ಧಿಕ ಆಸ್ತಿಯನ್ನು ತೆರೆದ ಮೂಲ ಪರವಾನಗಿ ಅಥವಾ ಸ್ಕೀಮ್‌ಗೆ ಉಪಪರವಾನಗಿದಾರನು ನೇರವಾಗಿ ಅಥವಾ ಪರೋಕ್ಷವಾಗಿ ಅನುಮತಿಸುವುದಿಲ್ಲ, ಇಲ್ಲಿ ಬಳಕೆಗೆ, ಮಾರ್ಪಡಿಸುವಿಕೆ ಮತ್ತು/ಅಥವಾ ವಿತರಣೆಗೆ ಅಗತ್ಯಕ್ಕೆ ತಡೆಯೊಡ್ಡುವುದು, Adobe ಸಾಫ್ಟ್‌ವೇರ್ ಅನ್ನು (i) ಮೂಲ ಕೋಡ್ ರೀತಿಯಲ್ಲಿ ಬಹಿರಂಗಪಡಿಸುವುದು ಅಥವಾ ವಿತರಿಸುವುದು; (ii) ಸಂಯುಕ್ತ ಕಾರ್ಯಗಳನ್ನು ಪೂರೈಸುವ ಉದ್ದೇಶಕ್ಕಾಗಿ ಪರವಾನಗಿ ನೀಡುವುದು; ಅಥವಾ (iii) ಯಾವುದೇ ಶುಲ್ಕವಿಲ್ಲದೆ ಮರುವಿತರಿಸುವುದಕ್ಕೆ ಅನುಮತಿಸಲಾಗುವುದಿಲ್ಲ. ಸ್ಪಷ್ಟೀಕರಣದ ಉದ್ದೇಶಗಳಿಗಾಗಿ, ಮೇಲ್ಕಂಡ ಪರಿಮಿತಿಯು ಉಪಪರವಾನಗಿದಾರ ವಿತರಣೆಗೆ ಅಡ್ಡಗಾಲು ಹಾಕುವುದಿಲ್ಲ, ಮತ್ತು Google ಸಾಫ್ಟ್‌ವೇರ್‌ನೊಂದಿಗೆ ಉಪಪರವಾನಗಿದಾರರು ಶುಲ್ಕರಹಿತವಾಗಿ, ಭಾರಿ ಪ್ರಮಾಣದಲ್ಲಿ Adobe ಸಾಫ್ಟ್‌ವೇರ್‌ನನ್ನು ವಿತರಿಸುತ್ತಾರೆ. </p>
152 <p>5. ಹೆಚ್ಚುವರಿ ನಿಯಮಗಳು ಉಪಪರವಾನಗಿಗಳಿಗೆ ನೀಡಲಾದ ಯಾವುದೇ ರೀತಿಯ ಉನ್ನತೀಕರಣ, ನವೀಕರಣ, Adobe ಸಾಫ್ಟ್‌ವೇರ್‌ನ (ಒಟ್ಟುಮೊತ್ತವಾಗಿ “ನವೀಕರಣಗಳು”) ಹೊಸ ಆವೃತ್ತಿಗಳಿಗೆ ಸಂಬಂಧಿಸಿರುವುದಕ್ಕೆ, ನವೀಕರಣಕ್ಕೆ ಮತ್ತು ಭವಿಷ್ಯದ ಆವೃತ್ತಿಗಳಿಗೆ ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳನ್ನು, ಮತ್ತು ಸಂಪೂರ್ಣವಾಗಿ ಆ ರೀತಿಯ ನಿಬಂಧನೆಗಳನ್ನು Adobe ಎಲ್ಲಾ ಪರವಾನಗಿದಾರರಿಗೆವಿಧಿಸುವವರೆಗೆ Adobe ಹಕ್ಕನ್ನು ಕಾಯ್ದಿರಿಸುತ್ತದೆ. ಆ ರೀತಿಯ ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಉಪಪರವಾನಗಿದಾರರು ಒಪ್ಪಲಿಲ್ಲವೆಂದರೆ, ಆ ರೀತಿಯ ನವೀಕರಣಕ್ಕೆ ಸಂಬಂಧಿಸಿದಂತೆ ಉಪಪರವಾನಗಿದಾರನು ಯಾವುದೇ ಪರವಾನಗಿ ಹಕ್ಕುಗಳನ್ನು ಹೊಂದಿರುವುದಿಲ್ಲ, ಮತ್ತು Adobe ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಉಪಪರವಾನಗಿದಾರನ ಪರವಾನಗಿ ಹಕ್ಕುಗಳು ಉಪಪರವಾನಗಿದಾರರಿಗೆ ಆ ರೀತಿಯ ಹೆಚ್ಚುವರಿ ನಿಯಮಗಳನ್ನು ಲಭ್ಯಮಾಡಿದ ದಿನಾಂಕದಿಂದ 90ನೇ ದಿನ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ.</p>
153 <p>6. ಒಡೆತನದ ಹಕ್ಕುಗಳ ಸೂಚನೆಗಳು. ಉಪಪರವಾನಗಿದಾರನು ಹಕ್ಕುಸ್ವಾಮ್ಯ ಪ್ರಕಟಣೆಗಳನ್ನು, ಟ್ರೇಡ್‌ಮಾರ್ಕ್‌ಗಳನ್ನು, ಲೋಗೋಗಳನ್ನು ಅಥವಾ ಸಂಬಂಧಿಸಿದ ಪ್ರಕಟಣೆಗಳನ್ನು ಅಥವಾ Adobe ನ (ಮತ್ತು ಅದರ ಪರವಾನಗಿದಾರರು, ಯಾರಾದರೂ ಇದ್ದಲ್ಲಿ) ಇತರ ಮಾಲೀಕತ್ವ ಹಕ್ಕುಗಳನ್ನು Adobe ಸಾಫ್ಟ್‌ವೇರ್ ಅಥವಾ ಜೊತೆಯಲ್ಲಿರುವ ವಸ್ತುಗಳ ಒಳಗೆ ಉಪಪರವಾನಗಿದಾರರು, ಮತ್ತು ಅವರ ವಿತರಕರು ಅಳಿಸುವುದಿಲ್ಲ, ಅಥವಾ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡುವುದಿಲ್ಲ ಎಂಬುದು ಅಗತ್ಯವಾಗಿದೆ.</p>
154 <p>7. ತಾಂತ್ರಿಕ ಅಗತ್ಯಗಳು. ಉಪಪರವಾನಗಿದಾರರು ಮತ್ತು ಅವರ ವಿತರಕರು Adobe ಸಾಫ್ಟ್‌ವೇರ್ ಅನ್ನು ಮಾತ್ರ ವಿತರಿಸಲು ಸಾಧ್ಯ ಮತ್ತು/ಅಥವಾ (i) http://www.adobe.com/mobile/licensees, (ಅಥವಾ ಉತ್ತರಾಧಿಕಾರ ಹೊಂದಿರುವ ವೆಬ್ ಸೈಟ್) ನಲ್ಲಿ ಪೋಸ್ಟ್ ಮಾಡಲಾದ ತಾಂತ್ರಿಕ ವಿವರಗಳನ್ನು ಪೂರೈಸಬೇಕು, ಮತ್ತು (ii) ಕೆಳಗೆ ತಿಳಿಸಿದಂತೆ Adobe ನಿಂದ ಪರಿಶೀಲಿಸಿರುವುದನ್ನು ಹೊಂದಿದ್ದರೆ ಆ ಸಾಧನಗಳಿಗೆ ನವೀಕರಿಸಬಹುದಾಗಿದೆ.</p>
155 <p>8. ಪರಿಶೀಲನೆ ಮತ್ತು ನವೀಕರಣ. Google ನಿಂದ Adobe ಗಾಗಿ ಪರಿಶೀಲಿಸಲು ಸಾಧನ ಪರಿಶೀಲನೆ ವಿನಾಯಿತಿಯ ಮಾನದಂಡವನ್ನು ಪೂರೈಸದೆ ಇರುವ Adobe ಸಾಫ್ಟ್‌ವೇರ್ ಮತ್ತು/ಅಥವಾ ನವೀಕರಣವನ್ನು (“ಉಪಪರವಾನಗಿದಾರರ ಉತ್ಪನ್ನ”) ಪ್ರತಿಯೊಬ್ಬ ಉಪಪರವಾನಗಿ ಉತ್ಪನ್ನ (ಮತ್ತು ಇಲ್ಲಿನಿಂದ ಪ್ರತಿಯೊಂದು) ವನ್ನು ಹೊಂದಿರುವ ಉಪಪರವಾನಗಿದಾರರು Adobe ಗೆ ಸಲ್ಲಿಸಬೇಕು. ಉಪಪರವಾನಗಿದಾರರು Adobe ನಿಂದ ಸಂಗ್ರಹಿಸಲಾದ ಪರಿಶೀಲನಾ ಪ್ಯಾಕೇಜ್‌ಗಳ ಮೂಲಕ ಉಪಪರವಾನಗಿದಾರರಿಂದ ಮಾಡಿದ ಪ್ರತಿ ಸಲ್ಲಿಕೆಗೆ ಉಪಪರವಾನಗಿದಾರರು ಪಾವತಿಸಬೇಕಾಗುತ್ತದೆ ನಂತರ ಪ್ರಸ್ತುತ ನಿಯಮಗಳನ್ನು http://flashmobile.adobe.com/ ನಿಂದ ಹೊಂದಿಸಲಾಗಿದೆ. ಪರಿಶೀಲನೆಯನ್ನು ಯಶಸ್ವಿಯಾಗಿ ಪೂರೈಸದ ಉಪಪರವಾನಗಿದಾರರ ಉತ್ಪನ್ನವನ್ನು ವಿತರಿಸಲಾಗುವುದಿಲ್ಲ. http://flashmobile.adobe.com/ (“ಪರಿಶೀಲನೆ”) ಯಲ್ಲಿ ವಿವರಿಸಿರುವಂತೆ Adobe ಆಗಿನ ಪ್ರಸ್ತುತ ಪ್ರಕ್ರಿಯೆಯೊಂದಿಗೆ ಪರಿಶೀಲನೆಯನ್ನು ಈಡೇರಿಸಲಾಗುತ್ತದೆ.</p>
156 <p>9. ಫ್ರೋಫೈಲ್‌ಗಳು ಮತ್ತು ಸಾಧನದ ಕೇಂದ್ರ. ಉಪಪರವಾನಗಿದಾರರ ಉತ್ಪನ್ನಗಳ ಬಗ್ಗೆ ಪರಿಶೀಲನಾ ಪ್ರಕ್ರಿಯೆಯ ಒಂದು ಭಾಗ ಅಥವಾ ಕೆಲವು ಇತರೆ ನಿಯಮದ ಅಂಗವಾಗಿ ಕೆಲವು ಪ್ರೊಫೈಲ್ ಮಾಹಿತಿಯನ್ನು ಪ್ರವೇಶಿಸುವ ಉಪಪರವಾನಗಿದಾರರು ಆ ರೀತಿಯ ಮಾಹಿತಿಯನ್ನು Adobe ಗೆ ಒದಗಿಸುತ್ತಾರೆ. Adobe ಬಹುಶಃ (i) ಉಪಪರವಾನಗಿದಾರರ ಉತ್ಪನ್ನವನ್ನು ಪರಿಶೀಲಿಸಲು ಯುಕ್ತವಾದ ಅಗತ್ಯಗಳಂತೆ ಕೆಲವು ಪ್ರೊಪೈಲ್ ಮಾಹಿತಿಯನ್ನು ಬಳಸಿ ( ಕೆಲವು ಉತ್ಪನ್ನದ ವಿಷಯ ಪರಿಶೀಲನೆಯಿದ್ದಲ್ಲಿ), ಮತ್ತು (ii) ಕೆಲವು ಪ್ರೋಪೈಲ್ ಮಾಹಿತಿಯನ್ನು “Adobe ಸಾಧನ ಮಾಹಿತಿ ಸಿಸ್ಟಂ” ಅನ್ನು ಪ್ರದರ್ಶಿಸುತ್ತದೆ, https://devices.adobe.com/partnerportal/ ಗುರುತಿಸಲಾಗಿದೆ, ಮತ್ತು Adobe ನ ಮೂಲಕ ಲಭ್ಯವಿದೆ ಮತ್ತು ಅಭಿವೃದ್ಧಿ ಉಪಕರಣಗಳು ಮತ್ತು ಸಕ್ರಿಯ ಅಭಿವೃದ್ದಿಗಾರರ ಸೇವೆಗಳು ಮತ್ತು ಉಪಪರವಾನಗಿ ಉತ್ಪನ್ನಗಳಲ್ಲಿ ಕೊನೆಯ ಬಳಕೆದಾರರು ಕಂಟೆಂಟ್ ಅಥವಾ ಅಪ್ಲಿಕೇಶನ್‌ಗಳನ್ನು ಹೇಗೆ ಪ್ರದರ್ಶಿಸಲಾಗಿದೆಯೆಂಬುದನ್ನು ನೋಡಿ (ಉದಾ. ನಿಗದಿತವಾದ ಪೋನ್‌ಗಳಲ್ಲಿ ವೀಡಿಯೊ ಚಿತ್ರಗಳು ಹೇಗೆ ಕಾಣಿಸುತ್ತವೆ).</p>
157 <p>10. ರಫ್ತು ಯುನೈಟೆಡ್ ಸ್ಟೇಟ್ಸ್‌ ಮೂಲದ ಯಾವುದೇ ಉತ್ಪನ್ನಗಳ ಹಾಗೂ ತಾಂತ್ರಿಕ ಡೇಟಾಗಳ ರಫ್ತು ಮತ್ತು ಮರು-ರಫ್ತುಗಳನ್ನು ಅಲ್ಲಿನ ಕಾನೂನುಗಳು ಹಾಗೂ ನಿಯಮಗಳು ನಿರ್ಬಂಧಿಸುತ್ತವೆ, ಮತ್ತು ಅವು Adobe ಸಾಫ್ಟ್‌ವೇರ್ ಅನ್ನು ಕೂಡಾ ಒಳಗೊಂಡಿರಬಹುದು ಎಂಬುದನ್ನು ಉಪಪರವಾನಗಿದಾರರು ಒಪ್ಪಿಕೊಳ್ಳುತ್ತಾರೆ. ಯುನೈಟೆಡ್ ಸ್ಟೇಟ್ಸ್‌ ಹಾಗೂ ವಿದೇಶಿ ಸರ್ಕಾರಗಳ ಅವಶ್ಯಕ ಅನುಮತಿ ಇಲ್ಲದೇ, Adobe ಸಾಫ್ಟ್‌ವೇರ್ ಅನ್ನು ರಫ್ತು ಮತ್ತು ಮರು-ರಫ್ತು ಮಾಡಲಾಗುವುದಿಲ್ಲ ಎಂಬುದನ್ನು ಉಪಪರವಾನಗಿದಾರರು ಒಪ್ಪುತ್ತಾರೆ.</p>
158 <p>11. ತಂತ್ರಜ್ಞಾನ ನಿಯಮಗಳ ಮೂಲಕ ಸಾಗುವುದು.</p>
159 <p>(a) ಅನ್ವಯವಾಗುವ ಅನುಮತಿಗಳು ಅಥವಾ ಒಪ್ಪಂದಗಳಿಗೆ ಅನುಸಾರವಾಗಿರುವುದು ಹೊರತುಪಡಿಸಿ, ಅನ್ವಯವಾಗುವ ಜನರಿಂದ ಅಥವಾ ಅವರೊಂದಿಗೆ, ಉಪಪರವಾನಗಿದಾರರು ಯಾವುದೇ ಪಿಸಿ ಅಲ್ಲದ ಸಾಧನಗಳಲ್ಲಿ (ಉದಾ., ಮೊಬೈಲ್ ಫೋನ್ ಅಥವಾ ಸೆಟ್-ಟಾಪ್ ಬಾಕ್ಸ್) mp3 ಮಾತ್ರ ಡೇಟಾವನ್ನು ಎನ್‌ಕೋಡ್ ಮಾಡಲು ಅಥವಾ ಡೀಕೋಡ್ ಮಾಡುವಲ್ಲಿ Adobe ಸಾಫ್ಟ್‌ವೇರ್ ಅನ್ನು ಬಳಸುವುದಿಲ್ಲ ಅಥವಾ ಬಳಕೆಗೆ ಅನುಮತಿಸುವುದಿಲ್ಲ, ಅಥವಾ Adobe ಸಾಫ್ಟ್‌ವೇರ್‌ನಲ್ಲಿ ಹೊಂದಿರುವ mp3 ಎನ್‌ಕೋಡರ್‌ಗಳು ಅಥವಾ ಡೀಕೋಡರ್‌ಗಳನ್ನು Adobe ಸಾಫ್ಟ್‌ವೇರ್ ಹೊರತುಪಡಿಸಿ ಯಾವುದೇ ಉತ್ಪನ್ನದಿಂದ ಬಳಸುವಂತಿಲ್ಲ ಅಥವಾ ಪ್ರವೇಶಿಸುವಂತಿಲ್ಲ. swf ಅಥವಾ flv ಫೈಲ್ ಒಳಗೆ ಹೊಂದಿರುವ MP3 ಡೇಟಾದ ಎನ್‌ಕೋಡಿಂಗ್ ಅಥವಾ ಡೀಕೋಡಿಂಗ್‌ಗೆ Adobe ಸಾಫ್ಟ್‌ವೇರ್ ಅನ್ನು ಬಳಸಬಹುದಾಗಿದೆ, ಇದು ವೀಡಿಯೊ, ಚಿತ್ರ ಅಥವಾ ಇತರ ಡೇಟಾವನ್ನು ಹೊಂದಿರುತ್ತದೆ. ಈ ವಿಭಾಗದಲ್ಲಿನ ನಿರ್ಬಂಧನಗಳಲ್ಲಿ ವಿವರಿಸಿರುವಂತೆ, PC ಅಲ್ಲದ ಸಾಧನಗಳಿಗಾಗಿ Adobe ಸಾಫ್ಟ್‌ವೇರ್‌ಅನ್ನು ಬಳಸಲು MP3 ತಾಂತ್ರಿಕತೆಗೆ ಹಾಗೂ Adobe ಗೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಪರವಾನಗಿ ರಾಯಧನವನ್ನು ಅಥವಾ ಇನ್ನಿತರ ಮೊತ್ತವನ್ನು ಸಲ್ಲಿಸತಕ್ಕದ್ದು. ಮತ್ತು Adobe ಅಥವಾ ಉಪಪರವಾನಗಿದಾರರು ಯಾವುದೇ ವಿಶೇಷ ಹಕ್ಕುಗಳು ಅಥವಾ ಇತರ ಹಣವನ್ನು ಮೂರನೇ ವ್ಯಕ್ತಿಯ ಬೌದ್ಧಿಕ ಆಸ್ತಿ ಹಕ್ಕುಗಳ ಬಳಕೆ ಹೊಂದಿರುವವರು ಪರವಾನಗಿಯ ವಿಶೇಷ ಹಕ್ಕುಗಳಿಗೆ ಪಾವತಿಯನ್ನು ಮಾಡಬೇಕಾದ ಅಗತ್ಯವಿದೆ ಎಂದು ಉಪಪರವಾನಗಿದಾರರು ಒಪ್ಪಿಗೆ ಸೂಚಿಸುತ್ತಾರೆ. ಉಪಪರವಾನಗಿದಾರನಿಗೆ ಆ ರೀತಿಯ ಬಳಕೆಗೆ MP3 ಎನ್‌ಕೋಡರ್ ಅಥವಾ ಡೀಕೋಡರ್‌ನ ಅಗತ್ಯವಿದ್ದರೆ, ಯಾವುದೇ ಅನ್ವಯವಾಗುವ ಪೇಟೆಂಟ್ ಹಕ್ಕುಗಳು ಸೇರಿದಂತೆ, ಅಗತ್ಯವಿರುವ ಬೌದ್ಧಿಕ ಆಸ್ತಿ ಪರವಾನಗಿಯನ್ನು ಪಡೆದುಕೊಳ್ಳುವ ಜವಾಬ್ದಾರಿಯನ್ನು ಉಪಪರವಾನಗಿದಾರನು ಹೊಂದಿರುತ್ತಾನೆ.</p>
160 <p>(b) ಉಪಪರವಾನಗಿದಾರರು ಇವುಗಳನ್ನು ಬಳಸುವುದಿಲ್ಲ, ನಕಲಿಸುವುದಿಲ್ಲ, ಮರುತಯಾರಿಸುವುದಿಲ್ಲ ಮತ್ತು ಮಾರ್ಪಡಿಸುವುದಿಲ್ಲ (i) ಫ್ಲ್ಯಾಶ್ ವೀಡಿಯೊ ಸ್ವರೂಪದಲ್ಲಿ (.flv ಅಥವಾ .f4v) ವೀಡಿಯೊವನ್ನು ಡೀಕೋಡ್ ಮಾಡುವಲ್ಲಿ Adobe ಸಾಫ್ಟ್‌ವೇರ್ ಅನ್ನು ಸಕ್ರಿಯಗೊಳಿಸುವಲ್ಲಿ ಅಗತ್ಯವಿರುವ On2 ಸೋರ್ಸ್ ಕೋಡ್ (ಸೋರ್ಸ್ ಕೋಡ್‌ನ ಒಂದು ಭಾಗವಾಗಿ ಇಲ್ಲಿ ಒದಗಿಸಲಾಗುತ್ತದೆ), ಮತ್ತು (ii) Adobe ಸಾಫ್ಟ್‌ವೇರ್‌ಗೆ ಬಗ್ ಫಿಕ್ಸ್‌ಗಳು ಮತ್ತು ಪ್ರಕ್ರಿಯೆಗಳನ್ನು ವರ್ಧಿಸುವ ನಿಯಮಿತ ಉದ್ದೇಶಕ್ಕಾಗಿ ಸೊರೆನ್ಸನ್ ಸ್ಪಾರ್ಕ್ ಸೋರ್ಸ್ ಕೋಡ್ (ಸೋರ್ಸ್ ಕೋಡ್‌ನ ಒಂದು ಭಾಗದಂತೆ ಇಲ್ಲಿ ಒದಗಿಸಲಾಗಿದೆ). Adobe ಸಾಫ್ಟ್‌ವೇರ್‌ನೊಂದಿಗೆ ಒದಗಿಸಲಾದ ಎಲ್ಲಾ ಕೋಡ್‌ಗಳನ್ನು Adobe ಸಾಫ್ಟ್‌ವೇರ್‌‌ನ ಸಮಗ್ರ ಭಾಗದಂತೆ ಮಾತ್ರ ಬಳಸಲಾಗಿದೆ ಮತ್ತು ವಿತರಿಸಲಾಗಿದೆ Adobe ಸಾಫ್ಟ್‌ವೇರ್ ಇತರೆ Google ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಯಾವುದೇ ಇತರೆ ಅಪ್ಲಿಕೇಶನ್‌ ಮೂಲಕ ಪ್ರವೇಶಿಸಲಾಗುವುದಿಲ್ಲ.</p>
161 <p>(c) AAC ಕೋಡ್ ಮತ್ತು/ ಅಥವಾ HE-AAC ಕೋಡ್‌ನೊಂದಿಗೆ ಮೂಲ ಕೋಡ್‌ನನ್ನು ಸಹಾ ಒದಗಿಸಲಾಗುತ್ತದೆ ("AAC codec"). AAC ಕೋಡೆಕ್‌ನ ಬಳಕೆಯು ಉಪಪರವಾನಗಿದಾರರು ಸೂಕ್ತವಾದ ಪೇಟೆಂಟ್ ಪರವಾನಗಿಯನ್ನು ಪಡೆದುಕೊಳ್ಳುವಲ್ಲಿ ಷರತ್ತು ವಿಧಿಸಲಾಗಿರುತ್ತದೆ VIA ಪರವಾನಗಿಯಿಂದ ಒದಗಿಸಲಾದ ಸೂಕ್ತವಾದ ಪೇಟೆಂಟ್‌ಗಳನ್ನು ಆವರಿಸಿಕೊಂಡು, AAC ಕೋಡೆಕ್ ಬಳಸಲಾಗುವ ಅಂತಿಮ ಉತ್ಪನ್ನಗಳಿಗಾಗಿ ಬಳಸಲಾಗುತ್ತದೆ. ಉಪಪರವಾನಗಿದಾರರಿಗೆ ಅಥವಾ ಅದರ ಉಪಪರವಾನಗಿದಾರರಿಗೆ ಈ ಒಪ್ಪಂದದಡಿ AAC ಕೋಡೆಕ್‌ಗೆ Adobe ಪೇಟೆಂಟ್ ಪರವಾನಗಿಯನ್ನು ಒದಗಿಸುತ್ತಿಲ್ಲ ಎಂದು ಉಪಪರವಾನಗಿದಾರನು ಸಮ್ಮತಿಸುತ್ತಾನೆ ಮತ್ತು ಒಪ್ಪಿಕೊಳ್ಳುತ್ತಾನೆ.</p>
162 <p>(d) AVC ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿ ಅಡಿಯಲ್ಲಿ ಗ್ರಾಹಕರ ವೈಯಕ್ತಿಕ ವಾಣಿಜ್ಯೇತರ ಬಳಕೆಗಾಗಿ ಮೂಲ ಕೋಡ್ ಕೋಡ್ (i) AVC ಪ್ರಮಾಣಿತಗಳೊಂದಿಗೆ ವೀಡಿಯೊಎನ್‌ಕೋಡ್ ಮಾಡಲು ("AVC ವೀಡಿಯೊ") ಮತ್ತು/ಅಥವಾ (ii) ವೈಯಕ್ತಿಕ ವಾಣಿಜ್ಯೇತರ ಚಟುವಟಿಕೆ ಮತ್ತು/ಅಥವಾ AVC ವೀಡಿಯೊ ಒದಗಿಸಲು ವೀಡಿಯೊ ಒದಗಿಸುವವರಿಂದ ಒದಗಿಸುವಲ್ಲಿ ಬದ್ಧವಾದ ಗ್ರಾಹಕರಿಂದ ಎನ್‌ಕೋಡ್ ಆದ AVC ವೀಡಿಯೊವನ್ನು ಡೀಕೋಡ್ ಮಾಡುವುದು. ಯಾವುದೇ ಪರವಾನಗಿಯನ್ನು ನೀಡಲಾಗಿಲ್ಲ ಹಾಗೂ ಬೇರೆ ಯಾವುದೇ ಉಪಯೋಗಗಳಿಗೆ ಬಳಸಲಾಗಿಲ್ಲ. MPEG LA, L.L.C. ನಿಂದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಲು http://www.mpegla.com ನೋಡಿ</p>
163 <p>12. ಅಪ್‌ಡೇಟ್‌. Google ಸಾಫ್ಟ್‌ವೇರ್‌ನೊಂದಿಗೆ ಬಂಡಲ್‌ನಂತೆ Adobe ಸಾಫ್ಟ್‌ವೇರ್ ಸಂಯೋಜಿಸಲು ಎಲ್ಲಾ ಉಪಪರವಾನಗಿದಾರರ ಉತ್ಪನ್ನಗಳನ್ನು ನವೀಕರಿಸಲು Google ನ or Adobe ನ ಪರಿಣಾಮಗಳಿಗೆ ಉಪಪರವಾನಗಿದಾರ ಅಡ್ಡಿಪಡಿಸುವುದಿಲ್ಲ ("ಉಪಪರವಾನಗಿದಾರ ಉತ್ಪನ್ನಗಳು").</p>
164 <p>13. ಆರೋಪಣೆ ಮತ್ತು ಒಡೆತನದ ಸೂಚನೆಗಳು. Adobe ಸಾಫ್ಟ್‌ವೇರ್ ಅನ್ನು ಉಪಪರವಾನಗಿದಾರನು ಸಾರ್ವಜನಿಕವಾಗಿ ಲಭ್ಯವಿರುವ ಉಪಪರವಾನಗಿ ಉತ್ಪನ್ನ ವಿವರಣೆಗಳಲ್ಲಿ ಪಟ್ಟಿ ಮಾಡುತ್ತಾರೆ ಮತ್ತು ಉಪಪರವಾನಗಿ ಉತ್ಪನ್ನ ಪ್ಯಾಕಿಂಗ್ ಅಥವಾ ಮಾರ್ಕೆಟಿಂಗ್ ವಸ್ತುಗಳನ್ನು ಇತರ ಮೂರನೇ ವ್ಯಕ್ತಿ ಉತ್ಪನ್ನಗಳ ಬ್ರ್ಯಾಂಡಿಗ್‌ನಂತೆಯೆ ಉಪಪರವಾಗನಿ ಉತ್ಪನ್ನದ ಒಳಗೆ ಸೂಕ್ತವಾದ Adobe ಸಾಫ್ಟ್‌ವೇರ್ ಬ್ರ್ಯಾಂಡಿಂಗ್ ಅನ್ನು (ವಿಶೇಷವಾಗಿ Adobe ಕಾರ್ಪೊರೇಟ್ ಲೋಗೊವನ್ನು ಹೊರತಾಗಿಸಿ) ಸೇರಿಸಲಾಗುತ್ತದೆ.</p>
165 <p>14. ಭರವಸೆಯಿಲ್ಲ. ADOBE ಸಾಫ್ಟ್‌ವೇರ್ ಅನ್ನು “ಇದ್ದದ್ದು ಇದ್ದಂತೆ” ಉಪಪರವಾನಗಿದಾರರ ಬಳಕೆಗೆ ಮತ್ತು ಮರುತಯಾರಿಕೆಗೆ ಲಭ್ಯ ಮಾಡಲಾಗಿದೆ ಮತ್ತು ADOBE ಅದರ ಬಳಕೆ ಮತ್ತು ಅದರ ಕಾರ್ಯಕ್ಷಮತೆಗೆ ಯಾವುದೇ ವಾರೆಂಟಿಯನ್ನು ನೀಡುವುದಿಲ್ಲ. ADOBE ಮತ್ತು ಅದರ ಪೂರೈಕೆದಾರರು ADOBE ಸಾಫ್ಟ್‌ವೇರ್ ಅನ್ನು ಬಳಸುವುದರಿಂದ ದೊರೆತ ಕಾರ್ಯಕ್ಷಮತೆ ಅಥವಾ ಫಲಿತಾಂಶಗಳಿಂದ ವಾರೆಂಟಿ ನೀಡಲಾಗುವುದಿಲ್ಲ. ಯಾವುದೇ ವಾರೆಂಟಿ, ಷರತ್ತು, ಪ್ರಾತಿನಿಧ್ಯ ಅಥವಾ ಉಪಪರವಾನಗಿದಾರರ ಕಾನೂನು ವ್ಯಾಪ್ತಿಯಲ್ಲಿ ಕಾನೂನಿಗೆ ಅನ್ವಯವಾಗುವಂತೆ ಪ್ರತ್ಯೇಕಿಸಲಾಗದಿರುವುದು, ADOBE ಮತ್ತು ಅದರ ಪೂರೈಕೆದಾರರು ಯಾವುದೇ ವಾರೆಂಟಿಗಳು, ಷರತ್ತುಗಳು, ಪ್ರಾತಿನಿಧಿಕಗಳು ಪ್ರತ್ಯೇಕಗೊಳ್ಳುವವರೆಗೆ ಅಥವಾ ನಿಯಮಿತವಾಗುವವರೆಗೆ ಹೊರತುಪಡಿಸಿ, ಅಥವಾ ಯಾವುದೇ ಮೂರನೇ ವ್ಯಕ್ತಿಗಳ ಹಕ್ಕುಗಳು, ಮರ್ಚೆಂಟಬಿಲಿಟಿ, ಸಮಗ್ರೀಕರಣ, ತೃಪ್ತಿಕರ ಗುಣಮಟ್ಟ, ಅಥವಾ ನಿಗಧಿತ ಉದ್ದೇಶಕ್ಕಾಗಿ ಅರ್ಹತೆ ಹೊಂದಿರುವುದರ ನಿಯಮಿತ ಉಲ್ಲಂಘನೆ ಇಲ್ಲದಿರುವುದು ಸೇರಿದಂತೆ ಯಾವುದೇ ವಿಷಯಕ್ಕೂ (ವ್ಯಕ್ತ ಅಥವಾ ಅವ್ಯಕ್ತ ಸ್ಟ್ಯಾಟ್ಯೂಟ್, ಸಾಮಾನ್ಯ ಕಾನೂನು, ಕಸ್ಟಮ್, ಬಳಕೆ ಅಥವಾ ಇನ್ನೇನಾದರೂ) ನಿಯಮಗಳು. ಉಪಪರವಾನಗಿದಾರನು ADOBE ನ ಪರವಾಗಿ ಯಾವುದೇ ವ್ಯಕ್ತ ಅಥವಾ ಅವ್ಯಕ್ತ ವಾರೆಂಟಿ ಮಾಡುವುದಿಲ್ಲ ಎಂದು ಉಪಪರವಾನಗಿದಾರನು ಒಪ್ಪಿಕೊಳ್ಳುತ್ತಾನೆ.</p>
166 <p>15. ಬಾಧ್ಯತೆಯ ಮಿತಿಗಳು. ಯಾವುದೇ ಹಾನಿಗಳು, ಹಕ್ಕುಗಳು ಅಥವಾ ವೆಚ್ಚಗಳು ಅಥವಾ ಯಾವುದೇ ತಾರ್ಕಿಕವಾಗಿ, ಪರೋಕ್ಷವಾಗಿ ಅಥವಾ ಸಾಂದರ್ಭಿಕ ಹಾನಿಗಳಿಗಾಗಿ ಅಥವಾ ಯಾವುದೇ ಕಳೆದುಕೊಂಡ ಲಾಭಗಳಿಗಾಗಿ ಅಥವಾ ಕಳೆದುಕೊಂಡ ಉಳಿತಾಯಗಳಿಗಾಗಿ, ಅಲ್ಲದೆ ADOBE ಪ್ರತಿನಿಧಿಯು ಸಹ ಆ ರೀತಿಯ ನಷ್ಟ, ಹಾನಿಗಳು ಹಕ್ಕುಗಳು ಅಥವಾ ವೆಚ್ಚಗಳು ಅಥವಾ ಯಾವುದೇ ಮೂರನೇ ವ್ಯಕ್ತಿಯಿಂದ ಹಕ್ಕು ಪಡೆಯಲು ಸೂಚಿಸಿದ್ದರೂ ಸಹ ಯಾವುದೇ ಘಟನೆಯಲ್ಲಿ ADOBE ಅಥವಾ ಅದರ ಪೂರೈಕೆದಾರರು ಉಪಪರವಾನಗಿದಾರರಿಗೆ ಬಾಧ್ಯತೆಗೊಳಗಾಗುವುದಿಲ್ಲ. ಉಪಪರವಾನಗಿದಾರರ ಕಾನೂನು ವ್ಯಾಪ್ತಿಯಲ್ಲಿ ಅನ್ವಯವಾಗುವ ಕಾನೂನಿನಿಂದ ಅನುಮತಿಸುವವರೆಗೆ ಮುಂದೆ ಹೋಗುವ ನಿಯಮಿತಗಳು ಮತ್ತು ಬಹಿಷ್ಕರಣೆಗಳು ಅನ್ವಯವಾಗುತ್ತವೆ. ADOBE ನ ಮತ್ತು ಅದರ ಪೂರೈಕೆದಾರರ ಒಟ್ಟುಮೊತ್ತ ಬಾಧ್ಯತೆ ಈ ಒಪ್ಪಂದದೊಂದಿಗೆ ಅದರ ಪೂರೈಕೆದಾರರ ಅಡಿಯಲ್ಲಿ ಅಥವಾ ಇದಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಡಾಲರುಗಳ (US$1,000) ಮಿತಿಯನ್ನು ಹೊಂದಿರುತ್ತದೆ. Adobe ನ ನಿರ್ಲಕ್ಷ್ಯತನ ಅಥವಾ ಮೋಸ (ವಂಚನೆ) ಯಿಂದಾಗಿ ಉಂಟಾಗುವ ಸಾವು ಅಥವಾ ವೈಯಕ್ತಿಕ ಘಾಸಿಗೆ Adobe ಯು ಉಪಪರವಾನಗಿದಾರರಿಗೆ ಬಾಧ್ಯಸ್ಥವಾಗುವ ಅಂಶವನ್ನು ಈ ಒಪ್ಪಂದ ಎಲ್ಲಿಯೂ ಒಳಗೊಂಡಿಲ್ಲ. ಹಕ್ಕುನಿರಾಕರಣೆ, ಬಾಧ್ಯತೆಗಳನ್ನು ಬೇರ್ಪಡಿಸಲು ಮತ್ತು/ಅಥವಾ ಮಿತಿಗೊಳಿಸಲು, ಈ ಒಪ್ಪಂದದಲ್ಲಿ ಒದಗಿಸಿರುವಂತೆ ವಾರೆಂಟಿಗಳು ಮತ್ತು ಬಾಧ್ಯತೆಗಳು, ಆದರೆ ಇತರೆ ಯಾವುದೇ ಉದ್ದೇಶಕ್ಕಾಗಿ Adobe ಅದರ ಪೂರೈಕೆದಾರರ ಪರವಾಗಿ ಕಾರ್ಯನಿರ್ವಹಿಸುತ್ತಿದೆ.</p>
167 <p>16. ವಿಷಯ ರಕ್ಷಣೆ ನಿಯಮಗಳು</p>
168 <p>(a) ವಿವರಣೆಗಳು.</p>
169 <p>“ಅನುಸರಣೆ ಮತ್ತು ಶಕ್ತಿಯುಕ್ತತೆಯ ನಿಯಮಗಳು” ಎಂದರೆ http://www.adobe.com/mobile/licensees ರಲ್ಲಿ ಸ್ಥಾನಿತವಾಗಿರುವ ಅಥವಾ ಉತ್ತರಾಧಿಕಾರದ ವೆಬ್ ಸೈಟ್‌ನಲ್ಲಿರುವಂತೆ Adobe ಸಾಫ್ಟ್‌ವೇರ್‌ಗಾಗಿ ಅನುಸರಣೆ ಮತ್ತು ಶಕ್ತಿಯುಕ್ತತೆಯ ನಿಯಮಗಳನ್ನು ಹೊಂದಿಸುವ ದಾಖಲೆ.</p>
170 <p>“ವಿಷಯ ರಕ್ಷಣೆ ಕಾರ್ಯಗಳು” ಎಂದರೆ ಅನುಸರಣೆ ಮತ್ತು ಶಕ್ತಿಯುಕ್ತತೆ ನಿಯಮಗಳೊಂದಿಗೆ Adobe ಸಾಫ್ಟ್‌ವೇರ್ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿನ್ಯಾಸಗೊಳಿಸಲಾಗಿರುವ ಅಂಶಗಳು, ಪ್ಲೇಬ್ಯಾಕ್, ನಕಲಿಸುವುದು, ಮಾರ್ಪಡಿಸುವುದು, ಮರುವಿತರಣೆ ಅಥವಾ ಡಿಜಿಟಲ್ ವಿಷಯಕ್ಕೆ ಸಂಬಂಧಿಸಿದಂತೆ Adobe ಸಾಫ್ಟ್‌ವೇರ್‌ನ ಬಳಕೆದಾರರ ಉಪಯೋಗಕ್ಕಾಗಿ ವಿತರಣೆ ಅಥವಾ ಇತರ ಕ್ರಿಯೆಗಳನ್ನು ಆ ರೀತಿಯ ಡಿಜಿಟಲ್ ವಿಷಯ ಅಥವಾ ಅದರ ಪರವಾನಗಿ ವಿತರಕರ ಮಾಲೀಕರಿಂದ ಅಂಗೀಕಾರ ಪಡೆಯದಿರುವ ಪರವಾನಗಿ ಹೊಂದಿಲ್ಲದಿರುವುದನ್ನು ತಪ್ಪಿಸುವ ವಿಷಯಗಳು.</p>
171 <p>“ವಿಷಯ ರಕ್ಷಣೆ ಕೋಡ್” ಎಂದರೆ ಒಂದು ನಿರ್ದಿಷ್ಟ ವಿಷಯ ರಕ್ಷಣೆ ಕಾರ್ಯಗಳನ್ನು ಸಕ್ರಿಯಗೊಳಿಸುವಂತಹ Adobe ಸಾಫ್ಟ್‌ವೇರ್‌ನ ಒಳಗಿರುವ ನಿರ್ದಿಷ್ಟ ನಿಯುಕ್ತಿಗೊಳಿಸಿರುವ ಆವೃತ್ತಿಗಳಲ್ಲಿರುವ ಕೋಡ್‌ಗಳು.</p>
172 <p>“ಕೀ” ಎಂದರೆ ಡಿಜಿಟಲ್ ವಿಷಯವನ್ನು ಡೀಕ್ರಿಪ್ಟ್ ಮಾಡುವ ಬಳಕೆಗಾಗಿ Adobe ಸಾಫ್ಟ್‌ವೇರ್‌ನಲ್ಲಿ ಹೊಂದಿರುವ ಕ್ರಿಪ್ಟೋಗ್ರ್ಯಾಫಿಕ್ ಮೌಲ್ಯ ಎಂದರ್ಥ.</p>
173 <p>(b) ಪರವಾನಗಿಯ ಪರಿಮಿತಿಗಳು. Adobe ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಪರವಾನಗಿಗಳನ್ನು ಚಲಾಯಿಸುವಲ್ಲಿನ ಉಪಪರವಾನಗಿದಾರರ ಹಕ್ಕು ಈ ಮುಂದಿನ ಹೆಚ್ಚುವರಿ ನಿಬಂಧನೆಗಳು ಮತ್ತು ಕಟ್ಟುಪಾಡುಗಳಿಗೆ ಕಾರಣವಾಗಿದೆ. Adobe ಸಾಫ್ಟ್‌ವೇರ್‌ನೊಂದಿಗೆ ಸಂಬಂಧಿಸಿದಂತೆ ಉಪಪರವಾನಗಿದಾರರಲ್ಲಿ ವಿಧಿಸಿರುವಂತೆ ಉಪಪರವಾನಗಿದಾರ ಗ್ರಾಹಕರು ಈ ನಿರ್ಬಂಧಗಳು ಮತ್ತು ಕಟ್ಟುಪಾಡುಗಳಿಗೆ ಅನುಸರಣೆ ಹೊಂದುತ್ತಾರೆ ಎಂಬುದನ್ನು ಉಪಪರವಾನಗಿದಾರು ಖಚಿತಪಡಿಸುತ್ತಾರೆ; ಈ ಹೆಚ್ಚುವರಿ ನಿರ್ಬಂಧಗಳು ಮತ್ತು ಕಟ್ಟುಪಾಡುಗಳ ಅನುಸರಣೆಯಲ್ಲಿ ಉಪಪರವಾನಗಿದಾರರ ಗ್ರಾಹಕರಿಂದ ಯಾವುದೇ ವಿಫಲತೆಯನ್ನು ಮತ್ತು ಬಾಧ್ಯತೆಗಳನ್ನು ಉಪಪರವಾನಗಿದಾರರಿಂದ ವಸ್ತುವಿನ ಉಲ್ಲಂಘನೆ ಎಂದು ಪರಿಗಣಿಸಲಾಗುವುದು.</p>
174 <p>b.1. ಮೇಲಿನ Adobe ನಿಯಮಗಳಲ್ಲಿ ವಿವರಿಸುವಂತೆ ಪರಿಶೀಲನೆ ಪ್ರಕ್ರಿಯೆ ಸಮಯದಲ್ಲಿ ಉಪಪರವಾನಗಿದಾರರಿಂದ ಖಚಿತಪಡಿಸಿರುವಂತೆ ಶಕ್ತಿಯುಕ್ತತೆ ಮತ್ತು ಅನುಸರಣೆ ನಿಯಮಗಳನ್ನು ಅನುಸರಿಸುವಂತಹ Adobe ಸಾಫ್ಟ್‌ವೇರ್ ಅನ್ನು ಮಾತ್ರ ಉಪಪರವಾನಗಿದಾರನು ಮತ್ತು ಗ್ರಾಹಕರು ವಿತರಿಸುತ್ತಾರೆ.</p>
175 <p>b.2. ಉಪಪರವಾನಗಿದಾರರು (i) Adobe ಸಾಫ್ಟ್‌ವೇರ್‌ನ ಬಳಕೆದಾರರಿಂದ ಅಧಿಕೃತ ಬಳಕೆಗಾಗಿ ಡಿಜಿಟಲ್ ವಿಷಯವನ್ನು ಎನ್‌ಕ್ರಿಪ್ಟ್ ಅಥವಾ ಡೀಕ್ರಿಪ್ಟ್ ಮಾಡಲು Adobe ಸಾಫ್ಟ್‌ವೇರ್ ಅಥವಾ ಸಂಬಂಧಿಸಿದ Adobe ಸಾಫ್ಟ್‌ವೇರ್‌‍ನ ವಿಷಯ ರಕ್ಷಣೆ ಕ್ರಿಯೆಗಳಲ್ಲಿ ಭಂಗಗೊಳಿಸುವುದು, ಅಥವಾ (ii) Adobe ಸಾಫ್ಟ್‌ವೇರ್ ಬಳಕೆದಾರರಿಂದ ಅಧಿಕೃತ ಬಳಕೆಗಾಗಿ Adobe ಸಾಫ್ಟ್‌ವೇರ್ ಅಥವಾ ಯಾವುದೇ Adobe ಸಾಫ್ಟ್‌ವೇರ್‌ನ ಡಿಜಿಟಲ್ ವಿಷಯವನ್ನು ಎನ್‌ಕ್ರಿಪ್ಟ್ ಅಥವಾ ಡೀಕ್ರಿಪ್ಟ್ ಮಾಡಲು ವಿಷಯ ರಕ್ಷಣೆ ಕ್ರಿಯೆಗಳಲ್ಲಿ ಭಂಗ ಉಂಟುಮಾಡಲು ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಅಥವಾ ವಿತರಿಸುವುದಿಲ್ಲ.</p>
176 <p>(c) ಕೀಗಳನ್ನು ಇಲ್ಲಿ Adobe ನ ಗೌಪ್ಯತೆ ಮಾಹಿತಿಯಂತೆ ಹೆಸರಿಸಲಾಗಿದೆ, ಮತ್ತು ಉಪಪರವಾನಗಿದಾರರು ಕೀಗಳಿಗೆ ಸಂಬಂಧಿಸಿದಂತೆ, Adobe ಸೋರ್ಸ್ ಕೋಡ್ ನಿರ್ವಹಣೆ ಕಾರ್ಯವಿಧಾನಕ್ಕೆ (Adobe ನ ವಿನಂತಿಯನುಸಾರವಾಗಿ ಒದಗಿಸಬೇಕಾಗುತ್ತದೆ) ಬದ್ಧರಾಗಿರುತ್ತಾರೆ.</p>
177 <p>(d) ಪ್ರತಿಬಂಧಕ ಪರಿಹಾರ. ಈ ಒಪ್ಪಂದದ ಉಲ್ಲಂಘನೆಯು Adobe ಸಾಫ್ಟ್‌ವೇರ್‌ನ ವಿಷಯ ರಕ್ಷಣೆ ಕ್ರಿಯೆಗಳಿಗೆ ರಾಜಿಯಾಗುತ್ತದೆ ಮತ್ತು Adobe ಮತ್ತು ಆ ರೀತಿಯ ವಿಷಯ ರಕ್ಷಣೆ ಕ್ರಿಯೆಗಳನ್ನು ಅವಲಂಬಿಸಿರುವ ಡಿಜಿಟಲ್ ವಿಷಯದ ಮಾಲೀಕರ ಕಾಳಜಿಗಳಿಗೆ ಅನನ್ಯವಾದ ಮತ್ತು ಎಂದಿಗೂ ತೀರದ ಹಾನಿಯುಂಟಾಗಬಹುದು, ಹಾಗೂ ಆ ರೀತಿಯ ಹಾನಿಗೆ ಪೂರ್ಣವಾಗಿ ನಷ್ಟ ತುಂಬಲು ಆ ಆರ್ಥಿಕ ಹಾನಿಗಳು ಅಸಮರ್ಪಕವಾಗಿರುತ್ತದೆ ಎಂಬುದನ್ನು ಉಪಪರವಾನಗಿದಾರರು ಒಪ್ಪಿಕೊಳ್ಳುತ್ತಾರೆ. ಆದ್ದರಿಂದ, ಆರ್ಥಿಕ ಹಾನಿಗಳಿಗೆ ಹೆಚ್ಚುವರಿಯಾಗಿ ಆ ರೀತಿಯ ಉಲ್ಲಂಘನೆಯಿಂದ ಉಂಟಾದ ಹಾನಿಯನ್ನು ತಪ್ಪಿಸಲು ಅಥವಾ ಮಿತಿಗೊಳಿಸಲು ನಿಷೇಧ ಪರಿಹಾರವನ್ನು ಕೇಳುವಲ್ಲಿ Adobe ಅರ್ಹತೆ ಹೊಂದಬಹುದು ಎಂಬುದನ್ನು ಉಪಪರವಾನಗಿದಾರನು ಮುಂದುವರಿದು ಸಮ್ಮತಿಸುತ್ತಾರೆ.</p>
178 <p>17. ಉದ್ದೇಶಿತ ಮೂರನೇ-ವ್ಯಕ್ತಿ ಫಲಾನುಭವಿ. Adobe Systems Incorporated ಮತ್ತು Adobe Software Ireland Limited Adobe ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಉಪಪರವಾನಗಿದಾರನೊಂದಿಗೆ, Adobe ನಿಯಮಗಳು ಸೇರಿದಂತೆ ಆದರೆ ನಿಯಮಿತವಾಗಿಲ್ಲದೆ, Google ನ ಒಪ್ಪಂದದ ಉದ್ದೇಶಿತ ಮೂರನೇ ವ್ಯಕ್ತಿ ಫಲಾನುಭವಿಗಳಾಗಿದ್ದಾರೆ. Google ನೊಂದಿಗೆ ಒಪ್ಪಂದಕ್ಕೆ ವಿರುದ್ಧವಾಗಿ ಯಾವುದಕ್ಕೂ ಪ್ರತಿಭಟಿಸುವುದಿಲ್ಲ, Adobe ಗೆ Google ಉಪಪರವಾನಗಿದಾರರ ಗುರುತನ್ನು ಬಹಿರಂಗಪಡಿಸಬಹುದು ಮತ್ತು Adobe ನಿಯಮಗಳನ್ನು ಹೊಂದಿರುವ Google ನೊಂದಿಗೆ ಉಪಪರವಾನಗಿದಾರನು ಪರವಾನಗಿ ಒಪ್ಪಂದಕ್ಕೆ ಬಂದಿದ್ದಾನೆ ಎಂದು ಲಿಖಿತರೂಪದಲ್ಲಿ ದೃಢೀಕರಿಸಲು ಉಪಪರವಾನಗಿದಾರರು ಸಮ್ಮತಿಸುತ್ತಾರೆ. ಉಪಪರವಾನಗಿದಾರರು ಪ್ರತಿಯೊಬ್ಬ ಪರವಾನಗಿದಾರರೊಂದಿಗೆ ಒಪ್ಪಂದಕ್ಕೆ ಬರಬೇಕು, ಮತ್ತು ಆ ರೀತಿಯ ಪರವಾನಗಿದಾರರಿಗೆ Adobe ಸಾಫ್ಟ್‌ವೇರ್ ಅನ್ನು ಮರುವಿತರಿಸಲು ಅನುಮತಿಸಿದಲ್ಲಿ, ಆ ಒಪ್ಪಂದವು Adobe ನ ನಿಯಮಗಳನ್ನು ಒಳಗೊಳ್ಳಬೇಕು.</p>
179 <p>ಏಪ್ರಿಲ್ 12, 2010</p>
180 </body>
181 </html>